ಜಕರ್ತಾ: ಹೆಬ್ಬಾವು ನಿಜವಾಗ್ಲೂ ಮನುಷ್ಯನನ್ನ ನುಂಗುತ್ತಾ? ಇಂಥದ್ದೊಂದು ಅನುಮಾನ ಎಷ್ಟೋ ಜನರನ್ನ ಕಾಡ್ತಿದೆ. ಆದ್ರೆ ನಿಜವಾಗ್ಲೂ ಹೆಬ್ಬಾವು ಮನುಷ್ಯನನ್ನ ನುಂಗುತ್ತೆ ಅನ್ನೋದಕ್ಕೆ ಇಂಡೋನೇ ಶ್ಯಾದಲ್ಲಿ ನಡೆದ ಘಟನೆ ಪ್ರತ್ಯಕ್ಷ ಸಾಕ್ಷಿ. ಹೌದು. ಸುಲಾವೆಸಿ ಪೂರ್ವ ದ್ವೀಪದ ಸಾಲೋಬಿರೋ ಗ್ರಾಮದ ರೈತನನ್ನು ಹೆಬ್ಬಾವು ನುಂಗಿದ್ದು,
7 ಮೀಟರ್ ಉದ್ದದ ಹೆಬ್ಬಾವಿನ ಹೊಟ್ಟೆ ಸೀಳಿದಾಗ ರೈತನ ಶವ ಪತ್ತೆಯಾಗಿದೆ. ಮೃತ ರೈತನನ್ನು 25 ವರ್ಷದ ಅಕ್ಬರ್ ಎಂದು ಗುರುತಿಸಲಾಗಿದೆ. ಈ ಹೆಬ್ಬಾವನ್ನು ಸೀಳಿ ಅಕ್ಬರ್ ಮೃತ ದೇಹವನ್ನು ಹೊರತೆಗೆಯೋ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಡೆದಿದ್ದೇನು?: ತಾಳೆ ಹಣ್ಣು ಕೊಯ್ಯಲೆಂದು ಜಮೀನಿಗೆ ಹೋದಾಗ ದೈತ್ಯ ಹೆಬ್ಬಾವು ಆತನನ್ನ ನುಂಗಿದೆ. ಇತ್ತ ರಾತ್ರಿಯಾದ್ರೂ ರೈತ ಮನೆಗೆ ಬರದಿರುವುದರಿಂದ ಆತಂಕಗೊಂಡ ಪೋಷಕರು ಎಷ್ಟು ಹುಡುಕಾಡಿದ್ರು ಆತ ಸಿಗಲಿಲ್ಲ. ಆದ್ರೆ ಹೆಬ್ಬಾವೊಂದು ಜಮೀನಿನಲ್ಲಿ ಒದ್ದಾಡುತ್ತಿತ್ತು. ಕೊನೆಗೆ ರೈತ ಧರಿಸಿದ್ದ ಶೂಗಳು ಕೃಷಿ ಸಲಕರಣೆಗಳು ಹೆಬ್ಬಾವಿನ ಪಕ್ಕದಲ್ಲೇ ಇತ್ತು. ಇದರಿಂದ ಅನುಮಾನಗೊಂಡ ರೈತರು ಹೆಬ್ಬಾವಿನ ಹೊಟ್ಟೆ ಸೀಳಿದಾಗ ರೈತನ ಶವ ದೊರೆತಿದೆ.