ಭಾರತದ ಖ್ಯಾತ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ (Virat Kohli) ಕ್ರಿಕೆಟ್ ಹೊರತಾಗಿ ಇನ್ಸ್ಟಾಗ್ರಾಂನಲ್ಲಿ (Instagram) ಫೋಟೋ ಮತ್ತು ವಿಡಿಯೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ನಲ್ಲಿ ಭಾರತದಲ್ಲೇ ಅತೀ ಹೆಚ್ಚು ಹಣ ಗಳಿಸುತ್ತಿರುವ ಭಾರತೀಯ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ವರದಿಯೊಂದರ ಪ್ರಕಾರ, 2023ರಲ್ಲಿ ಕೊಹ್ಲಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಪ್ರತಿಯೊಂದು ಪ್ರಾಯೋಜಿತ ಪೋಸ್ಟ್ಗೆ (Sponsored Post) 14 ಕೋಟಿ ರೂ.ಗಳನ್ನು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಫುಟ್ಬಾಲ್ ದಿಗ್ಗಜ ಕ್ರಿಸ್ಟಿಯಾನೋ ರೊನಾಲ್ಡೊ (Cristiano Ronaldo) ಅಗ್ರಸ್ಥಾನವನ್ನು ಪಡೆದಿದ್ದು, ಮುಂದಿನ ಸ್ಥಾನವನ್ನು ಲಿಯೋನೆಲ್ ಮೆಸ್ಸಿ (Lionel Messi) ಅವರು ಪಡೆದುಕೊಂಡಿದ್ದಾರೆ
ರೊನಾಲ್ಡೊ ಪೋಸ್ಟ್ ಮಾಡುವ ಪ್ರಾಯೋಜಿತ ಪೋಸ್ಟ್ಗೆ ಸುಮಾರು 3.23 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಡೆಯುತ್ತಾರೆ. ಅಂದರೆ ಪ್ರತಿ ಪೋಸ್ಟ್ಗೆ ಸುಮಾರು 26.75 ಕೋಟಿ ರೂಗಳನ್ನು ಪಡೆಯುತ್ತಾರೆ. ಅಂತೆಯೇ ಮೆಸ್ಸಿ ಪ್ರತಿ ಇನ್ಸ್ಟಾಗ್ರಾಂ ಪೋಸ್ಟ್ಗೆ ಸುಮಾರು 2.56 ಮಿಲಿಯನ್ (21.49 ಕೋಟಿ ರೂ.) ನಗದನ್ನು ಪಡೆಯುತ್ತಾರೆ ಎಂದು ವರದಿಗಳು ತಿಳಿಸಿವೆ
ವಿರಾಟ್ ಕೊಹ್ಲಿ ಜಾಗತಿಕವಾಗಿ ಟಾಪ್ 20 ಪಟ್ಟಿಯಲ್ಲಿ ಸ್ಥಾನವನ್ನು ಪಡೆದ ಏಕೈಕ ಭಾರತೀಯನಾಗಿದ್ದು, ಇನ್ಸ್ಟಾಗ್ರಾಂ ಪ್ಲಾಟ್ಫಾರ್ಮ್ನಲ್ಲಿ 25.6 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಇವರನ್ನು ಹೊರತುಪಡಿಸಿ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ (Priyanka Chopra) ಈ ಪಟ್ಟಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದ್ದು, ಪ್ರತಿ ಪೋಸ್ಟ್ಗೆ 532,000 ಅಮೆರಿಕನ್ ಡಾಲರ್ (4.40 ಕೋಟಿ ರೂ.) ಹಣವನ್ನು ಪಡೆಯುತ್ತಾರೆ.