ಮಹಾರಾಷ್ಟ್ರ ;- ವಿಐಪಿಗಳ ವಾಹನದಲ್ಲಿ ಸೈರನ್ಗೆ ಬ್ರೇಕ್ ಹಾಕಲಾಗಿದ್ದು, ಹಾರ್ನ್ಗೆ ಬದಲಾಗಿ ಭಾರತೀಯ ಸಂಗೀತ ಬರಲಿದೆ. ವಿಐಪಿಗಳ ವಾಹನಗಳಲ್ಲಿನ ಸೈರನ್ಗಳನ್ನು ಶೀಘ್ರವೇ ನಿರ್ಬಂಧಿಸಲು ಕ್ರಮಕೈಗೊಳ್ಳಲಾಗುವುದು.
ಸಚಿವರು ಹಾಗೂ ವಿಐಪಿಗಳ ಕಾರುಗಳಲ್ಲಿ ಶಿಷ್ಟಾಚಾರದ ಭಾಗವಾಗಿ ಸೈರನ್ಗಳನ್ನು ಅಳವಡಿಸಲಾಗಿದೆ. ರಸ್ತೆಯಲ್ಲಿ ಸೈರನ್ ಮಾಡುತ್ತ ಬರುವ ವಾಹನಗಳನ್ನು ಕಂಡಕೂಡಲೇ ಪೊಲೀಸರು ಅವು ವಿಐಪಿಗಳ ವಾಹನ ಎಂದು ತಿಳಿದು ಅವರಿಗಾಗಿ (ಟ್ರಾಫಿಕ್ ಕ್ಲಿಯರ್) ಸಂಚಾರಕ್ಕೆ ಅನುವು ಮಾಡಿಕೊಡುತ್ತಿದ್ದರು. ಆದರೆ, ಕೆಲವರು ಈ ಸೈರನ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಸಂಚಾರ ದಟ್ಟಣೆಯಿಂದ ಪಾರಾಗುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ವಿಐಪಿಗಳು ಇಲ್ಲದ ಸಮಯದಲ್ಲೂ ಸೈರನ್ ಬಳಸಿಕೊಂಡಿರುವುದು ಕಂಡು ಬಂದಿದೆ. ಇನ್ನು ಕೆಲವರು ಸರ್ಕಾರದಿಂದ ಅನುಮತಿ ಪಡೆಯದೆಯೇ ತಮ್ಮ ವಾಹನಗಳಲ್ಲಿ ಸೈರನ್ಗಳನ್ನು ಅಳವಡಿಸಿಕೊಂಡಿದ್ದಾರೆ. ಇವೆಲ್ಲದರ ಪರಿಣಾಮ ಸಾಮಾನ್ಯ ಜನರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೇ, ಇದರಿಂದಾಗಿ ಶಬ್ದ ಮಾಲಿನ್ಯವೂ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.