ವಾಷಿಂಗ್ಟನ್: ಅಮೆರಿಕದ ಮಿಷಿಗನ್ನ (Michigan) 38 ವರ್ಷದ ಮಹಿಳೆಯೊಬ್ಬರು ಉದ್ದದ ಗಡ್ಡ ಹೊಂದಿದ್ದು, ಇದು ಗಿನ್ನೆಸ್ ವಿಶ್ವದಾಖಲೆಯಾಗಿದೆ (Guinness World Record). ಎರಿನ್ ಹನಿಕಟ್ (Erin Honeycutt) ತನ್ನ 11.8-ಇಂಚಿನ (29.9 cm) ಗಡ್ಡವನ್ನು ಸುಮಾರು ಎರಡು ವರ್ಷಗಳಿಂದ ಬೆಳೆಸುತ್ತಿದ್ದಾರೆ ಎಂದು ಗಿನ್ನೆಸ್ ವಿಶ್ವ ದಾಖಲೆಗಳ ಪತ್ರಿಕಾ ಪ್ರಕಟಣೆ ತಿಳಿಸಿದೆ.
25.5 ಸೆಂ.ಮೀ ಹಿಂದಿನ ದಾಖಲೆಯು ಯುಎಸ್ನ 75 ವರ್ಷದ ವಿವಿಯನ್ ವೀಲರ್ಗೆ ಸೇರಿತ್ತು. ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್ನ ಪರಿಣಾಮದಿಂದ ಈಕೆಗೆ ಗಡ್ಡ ಬೆಳೆದಿದೆ. ಈ ಸ್ಥಿತಿಯು ಹಾರ್ಮೋನುಗಳ ಅಸಮತೋಲನ ಮತ್ತು ಅನಿಯಮಿತ ಮುಟ್ಟು, ತೂಕ ಹೆಚ್ಚಾಗುವುದು ಮತ್ತು ಬಂಜೆತನಕ್ಕೆ ಕಾರಣವಾಗುತ್ತದೆ.