ಕನ್ನಡ ಸಿನೆಮಾ ಲೋಕದಲ್ಲಿ ಹೊಸ ಟ್ರೆಂಡ್ ಹುಟ್ಟು ಹಾಕಿರುವ ರಾಜ್ ಬಿ. ಶೆಟ್ಟಿ ಅವರ ನೇತೃತ್ವದಲ್ಲಿ “ಟೋಬಿ’ ಕನ್ನಡ ಸಿನೆಮಾ ಆ. 25ರಂದು ರಾಜ್ಯಾದ್ಯಂತ ತೆರೆಕಾಣಲಿದೆ
ಇಲ್ಲೂ ಟ್ರೇಲರ್ನಲ್ಲಿ ನಾನು ಲುಂಗಿ ಉಟ್ಟಿರುವುದರಿಂದ ಜಿಜಿವಿವಿ ಚಿತ್ರದ ಛಾಯೆ ಇದರಲ್ಲಿ ಕಂಡಿರಬಹುದು. ಜಿಜಿವಿವಿ ನಮ್ಮ ಹೊಸ ಪ್ರಯತ್ನವಾದ್ದರಿಂದ ಜನರನ್ನು ಸೆಳೆಯಲು ಟ್ರೇಲರ್ನಲ್ಲಿ ಚಿತ್ರದ ಮುಖ್ಯಾಂಶಗಳನ್ನು ಹಾಕಿದ್ದೆವು, ಆದರೆ “ಟೋಬಿ’ ಟ್ರೇಲರ್ನಲ್ಲಿ ಚಿತ್ರದ ಯಾವುದೇ ಕಥೆಯ ಸುಳಿವು ಕೂಡ ಕೊಟ್ಟಿಲ್ಲ. ಹಾಗಾಗಿ ಇದಕ್ಕೂ ಜಿಜಿವಿವಿಗೂ ಯಾವುದೇ ಲಿಂಕ್ ಇರುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ ಬಿ. ಶೆಟ್ಟಿ ಸ್ಪಷ್ಟಪಡಿಸಿದರು.
ಜಿಜಿವಿವಿಗೆ ಹೋಲಿಸಿದರೆ ಟೋಬಿ ಹತ್ತು ಪಟ್ಟು ಹೆಚ್ಚು ಪ್ರಯತ್ನ, ವೆಚ್ಚ, ಶ್ರಮ ಹಾಕಿರುವ ಚಿತ್ರ. ಜಿಜಿವಿವಿ
ಯಲ್ಲಿ ಹರಿ, ಶಿವ ಇಬ್ಬರೂ ಕುಟುಂಬದಿಂದ ವಿಮುಖರಾದವರು, ಟೋಬಿಹಾಗಿಲ್ಲ, ಇದು ಕೌಟುಂಬಿಕ ಬಾಂಧವ್ಯ ಇರುವ ಚಿತ್ರ ಎರಡೂ ಬೇರೆಯೇ ಆಗಿವೆ ಎಂದರು.