ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿರುವ ಹೊತ್ತಲ್ಲೇ ರಜನಿಕಾಂತ್, ದೂರದ ಹಿಮಾಲಯದಲ್ಲಿ ಕುಳಿತಿದ್ದಾರೆ.
ರಜನಿಕಾಂತ್ ಹಿಮಾಲಯಕ್ಕೆ ಹೋಗುವುದು, ದೇವರ ದರ್ಶನ ಪಡೆಯುವುದು, ಮಠಕ್ಕೆ ಭೇಟಿ ನೀಡುವುದು, ಧ್ಯಾನದಲ್ಲಿ ಮಗ್ನರಾಗುವುದು ಹೊಸದೇನಲ್ಲ. ಈ ಬಾರಿಯೂ ಜೈಲರ್ ರಿಲೀಸ್ ಆಗುತ್ತಿದ್ದಂತೆ ರಜನಿಕಾಂತ್ ಬಲಗೈ ಫಕೀರನ ಹಾಗೆ ಹಿಮಾಲಯ ಏರಿದ್ದಾರೆ.
ರಜನಿಕಾಂತ್ ಚೆನ್ನೈನಿಂದ ಬೆಂಗಳೂರಿಗೆ ಹೋಗಿ ಅಲ್ಲಿಂದ ತಮ್ಮ ಆಪ್ತ ಗೆಳೆಯ ಹರಿ ಜೊತೆ ದೆಹಲಿಗೆ ಹೋಗಿದ್ದಾರೆ. ರಜನಿಕಾಂತ್ ದೆಹಲಿಯಿಂದ ಉತ್ತರಾಖಂಡದ ನೈನಿತಾಲ್ಗೆ ಹೋಗಿ ಅಲ್ಲಿಂದ ಹಿಮಾಲಯದ ಬಾಬಾ ಗುಹೆಗೆ ತೆರಳಿದ್ದರು
ನಾಲ್ಕು ವರ್ಷಗಳ ನಂತರ ಬಾಬಾ ಗುಹೆಗೆ ರಜನಿಕಾಂತ್ ಪ್ರವಾಸ ಕೈಗೊಂಡಿದ್ದರು. 10 ದಿನಗಳ ಕಾಲ ಯಾತ್ರೆ ನಡೆಸಿ ನಟ ವಾಪಸ್ ಆಗಲಿದ್ದಾರೆ. ಪ್ರಯಾಣದ ದಿನಗಳನ್ನು ಹೊರತುಪಡಿಸಿ 5 ದಿನಗಳ ಕಾಲ ಗುಹೆಯಲ್ಲಿ ತಂಗಿದ್ದಾರೆ ಎನ್ನಲಾಗಿದೆ.
ಕೊಯಮತ್ತೂರು ಸಚ್ಚಿದಾನಂದ ಸ್ವಾಮಿಯವರು ನಟ ರಜನಿಕಾಂತ್ ಅವರನ್ನು ಬಾಬಾಗೆ ಪರಿಚಯಿಸಿದರು. ಅಂದಿನಿಂದ ರಜನಿಕಾಂತ್ ಹಿಮಾಲಯಕ್ಕೆ ಹೋಗಿ ಬರ್ತಿದ್ದಾರೆ. ರಜನಿಕಾಂತ್ ಅವರು 1997 ಮತ್ತು 1998 ರಲ್ಲಿ ಮೊದಲ ಬಾರಿಗೆ ಹಿಮಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸಿದರು
ಆಗಾಗ ರಜನಿಕಾಂತ್ ಹಿಮಾಲಕ್ಕೆ ಹೋಗಿ ಕೆಲ ದಿನಗಳನ್ನು ಕಳೆದಿದ್ದಾರೆ. ಹಿಮಾಲಯವೇ ಶಾಂತಿ, ವಿಜಯ ಹಾಗೂ ಸಂತೋಷದ ತಾಣ ಎಂದು ರಜನಿಕಾಂತ್ ಹೇಳಿಕೊಂಡಿದ್ದಾರೆ
ಆಧ್ಯಾತ್ಮದ ಸೆಳೆತವಿರುವ ರಜನಿಕಾಂತ್ ಹಿಮಾಲಯದಲ್ಲಿ ಕಲ್ಲು ಮುಳ್ಳಿನ ಹಾದಿಯಲ್ಲೇ ನಡಯುತ್ತಾರೆ. ಗುಹೆಗೆ ಹೋಗುವ ದಾರಿಯಲ್ಲಿ ರಸ್ತೆಯ ಮೇಲೆ ಮಲಗುವುದು ಮತ್ತು ಋಷಿಗಳೊಂದಿಗೆ ಮಾತಾಡುತ್ತಾ ಸಾಗುತ್ತಾರೆ.