ಗುಜರಾತ್ ;- ಇಲ್ಲಿನ ರಾಜ್ಕೋಟ್ನಲ್ಲಿ ಪೋರ್ನ್ ವೆಬ್ಸೈಟ್ ಒಂದಕ್ಕೆ ವಿಡಿಯೋ ಚಿತ್ರೀಕರಿಸಲು ಲೈವ್ ಸೆಕ್ಸ್ ಮಾಡುವಂತೆ ಗಂಡ ಮತ್ತು ಮಾವ ಮಹಿಳೆಯನ್ನು ಒತ್ತಾಯಿಸಿರುವ ಘಟನೆ ಜರುಗಿದೆ. ಈ ಹಿನ್ನೆಲೆ ಮಹಿಳೆಯೊಬ್ಬಳು ದೂರು ನೀಡಿರುವ ಘಟನೆ ಗುಜರಾತಿನ ರಾಜ್ಕೋಟ್ನಲ್ಲಿ ನಡೆದಿದೆ.
ಸಂತ್ರಸ್ತೆ ಮಹಿಳೆಯ ವಯಸ್ಸು 21 ವರ್ಷ. ಅಶ್ಲೀಲ ವೆಬ್ಸೈಟ್ಗೆ ಗಂಡನೊಂದಿಗೆ ಲೈವ್ ಸೆಕ್ಸ್ ಮಾಡುವಂತೆ ಗಂಡ ಮತ್ತು ಮಾವ ಇಬ್ಬರು ಒತ್ತಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಳೆದ ಎರಡು ವಾರಗಳಿಂದ 10 ಬಾರಿ ಒತ್ತಾಯ ಮಾಡಿದ್ದಾರೆ. ಅಲ್ಲದೆ, ಆಕೆಯ ಬೆತ್ತಲೆ ವಿಡಿಯೋವನ್ನು ರಹಸ್ಯವಾಗಿ ಸೆರೆಹಿಡಿದಿರುವುದಾಗಿ ಸಂತ್ರಸ್ತೆ ಆರೋಪ ಮಾಡಿದ್ದಾಳೆ.
ಮಾವ ನಗರದ ಹೋಟೆಲ್ ಒಂದರಲ್ಲಿ ಷೇರು ಹೊಂದಿದ್ದರು. ಆದರೆ, ಈಗ ಸ್ವಲ್ಪ ಷೇರು ಮಾತ್ರ ಹೊಂದಿದ್ದಾರೆ. ಈ ಕಾರಣಕ್ಕಾಗಿ ಇಬ್ಬರು ಅಶ್ಲೀಲ ವೆಬ್ಸೈಟ್ಗಳಿಂದ ಹಣ ಗಳಿಸಲು ಯೋಜಿಸಿದ್ದಾರೆ ಎಂದು ಸಂತ್ರಸ್ತ ತಿಳಿಸಿದ್ದಾಳೆ.
ಸಂತ್ರಸ್ತೆ ಮತ್ತು ಆಕೆಯ ಗಂಡ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದರು. ಅವರಿಗೆ ಅವಳಿ ಮಕ್ಕಳಿದ್ದಾರೆ. ಇತ್ತೀಚೆಗೆ ಅಶ್ಲೀಲ ವಿಡಿಯೋ ಚಿತ್ರೀಕರಣಕ್ಕಾಗಿ ಕಿರುಕುಳ ನೀಡುತ್ತಿದ್ದಾರೆ. ಕ್ಯಾಮೆರಾದಲ್ಲಿ ಲೈವ್ ಸೆಕ್ಸ್ ಮಾಡುವುದನ್ನು ಕಲಿಸಲು ವಿದೇಶಿ ಮಹಿಳೆಯರನ್ನು ಹೋಟೆಲ್ ಕೋಣೆಗೆ ಮಾವ ಕರೆತಂದರು ಮತ್ತು ನನ್ನ ಮುಂದೆಯೇ ಅವರೊಂದಿಗೆ ಲೈಂಗಿಕ ಕ್ರಿಯೆ ನಡೆಸಿದರು. ಹೆಚ್ಚಾಗಿ ಲೈಂಗಿಕ ಆಟಿಕೆಗಳನ್ನು ಬಳಸಿದ್ದರಿಂದ ನನಗೆ ಸೋಂಕು ಸಹ ತಗುಲಿದೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಆಧಾರದ ಮೇಲೆ ಸಂತ್ರಸ್ತೆಯ ಗಂಡ ಮತ್ತು ಮಾವನನ್ನು ರಾಜ್ಕೋಟ್ ಪೊಲೀಸರು ಬಂಧಿಸಿದ್ದಾರೆ.