ನವದೆಹಲಿ;- ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಆಯಪಲ್, ಮೊಬೈಲ್ಗಳನ್ನು ಚಾರ್ಜಿಂಗ್ ಹಾಕಿ, ಅದರ ಪಕ್ಕವೇ ಮಲಗಿ ನಿದ್ರಿಸುವ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ.
ಇಂಥ ಅಭ್ಯಾಸಗಳು ಪ್ರಾಣಕ್ಕೇ ಸಂಚಕಾರ ತರಬಹುದು ಎಂದಿದೆ. ಸರಿಯಾಗಿ ಫೋನ್ ಚಾರ್ಜಿಂಗ್ ಹಾಕುವುದರ ಕುರಿತು ಮಾಹಿತಿ ನೀಡಿರುವ ಸಂಸ್ಥೆ, ಕೆಲವೊಮ್ಮೆ ಚಾರ್ಜಿಂಗ್ ಹಾಕಿರುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸುವ ತೀವ್ರತೆಗೆ ಬೆಂಕಿ ಹೊತ್ತಿಕೊಳ್ಳುವ, ಫೋನ್ಗಳು ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಇದರಿಂದ ಪಕ್ಕದಲ್ಲಿ ಮಲಗಿದ್ದವರಿಗೂ ಗಾಯಗಳಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಆದಷ್ಟು ಗಾಳಿಗೆ ತೆರೆದುಕೊಳ್ಳುವ ಪ್ರದೇಶದಲ್ಲಿ ಮೊಬೈಲ್ ಚಾರ್ಜಿಂಗ್ ಹಾಕುವುದನ್ನು ಖಚಿತಪಡಿಸಿಕೊಳ್ಳಿ ಹಾಗೂ ದಿಂಬಿನ ಕೆಳಗೆ, ಹೊದಿಕೆಯ ಒಳಗೆ ಮೊಬೈಲ್ಗಳನ್ನು ಇಟ್ಟು ಮಲಗುವುದನ್ನೂ ನಿಗ್ರಹಿಸುವಂತೆ ಸಲಹೆ ನೀಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ ಸಂಘಟನೆಯನ್ನು ನಿಷೇಧಿಸುವುದಿಲ್ಲ: ದಿಗ್ವಿಜಯ ಸಿಂಗ್