ಈಗಿನ ಲೈಫ್ ಸ್ಟೈಲ್, ಸದಾ ಕಂಪ್ಯೂಟರ್ ಮುಂದೆ ಕೆಲಸ, ವಿಶ್ರಾಂತಿ ಇಲ್ಲದ ಜೀವನ ಹಾಗೂ ಮಾಲಿನ್ಯ ಕಣ್ಣಿನ ಸಮಸ್ಯೆಯನ್ನು ಮತ್ತಷ್ಟು ಜಾಸ್ತಿ ಮಾಡ್ತಾ ಇದೆ.
ಬಿಸಿಲ ತಾಪ ಜಾಸ್ತಿಯಾಗ್ತಾ ಇದ್ದಂತೆ ಕಣ್ಣಿನ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಬೇಸಿಗೆಯಲ್ಲಿ ಕಣ್ಣಿಗೆ ಹೆಚ್ಚಿನ ಆರೈಕೆ ಮಾಡುವ ಅಗತ್ಯವಿದೆ. ಕಣ್ಣಿನ ಆರೈಕೆಯನ್ನು ಹೇಗೆ ಮಾಡಬೇಕು ಅಂತಾ ನಾವು ಹೇಳ್ತೇವೆ ಕೇಳಿ.
ಸುಡು ಬಿಸಿಲಿನಲ್ಲಿ ಹೊರಗೆ ಹೋಗಬೇಡಿ. ಅತೀ ಅವಶ್ಯವಿದ್ದಲ್ಲಿ ಕಪ್ಪು ಕನ್ನಡಕವನ್ನು ಮರೆಯದೇ ಬಳಸಿ. 8 ಗಂಟೆಗಳ ಕಾಲ ನಿದ್ದೆ ಮಾಡಿ. ಇಲ್ಲವಾದ್ರೆ ಕಣ್ಣಿನ ಕೆಳಗೆ ಕಪ್ಪು ಕಲೆಗಳಾಗುತ್ತವೆ. ಇದು ನಿಮ್ಮ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಸನ್ ಗ್ಲಾಸ್ ಕೇವಲ ಬಿಸಿಲಿಗೆ ಮಾತ್ರವಲ್ಲ ಮಾಲಿನ್ಯದಿಂದಾಗುವ ಅಲರ್ಜಿಯನ್ನೂ ಕಡಿಮೆ ಮಾಡುತ್ತದೆ.
ನಿಮ್ಮ ಸೌಂದರ್ಯವರ್ಧಕವನ್ನು ಬೇರೆಯವರಿಗೆ ನೀಡಬೇಡಿ. ಕ್ಯಾರೆಟ್, ಹಸಿರು ತರಕಾರಿ, ಮೊಳಕೆಯೊಡೆದ ಧಾನ್ಯಗಳನ್ನು ಹೆಚ್ಚು ಸೇವಿಸಿ.
ಪ್ರತಿ ದಿನ ಕಡಿಮೆ ಎಂದ್ರೂ ಎರಡು ಲೀಟರ್ ನೀರನ್ನು ಕುಡಿಯಿರಿ. ಯಾಕೆಂದ್ರೆ ಬೇಸಿಗೆಯಲ್ಲಿ ದೇಹದ ತೇವಾಂಶ ಕಡಿಮೆಯಾಗುವ ಸಾಧ್ಯತೆ ಜಾಸ್ತಿ ಇರುತ್ತದೆ. ಇದು ಕಣ್ಣಿಗೂ ಬಹಳ ಮುಖ್ಯ.