ತರಕಾರಿ ಸೂಪ್ ಅನ್ನು ಪ್ರತಿದಿನ ಕುಡಿಯುವುದರಿಂದ ಜೀರ್ಣಶಕ್ತಿ ಪ್ರಮಾಣ ಹೆಚ್ಚಾಗುತ್ತದೆ. ಇಂತಹ ತರಕಾರಿ ಸಿಂಪಲ್ ಸೂಪ್ ತಯಾರಿಸುವ ಮಾಹಿತಿ ಇಲ್ಲಿದೆ.
ತರಕಾರಿ ಬೇಯಿಸಿದ ನೀರು -2 ಲೋಟ, ಉಪ್ಪು -ಅರ್ಧ ಚಮಚ, ಕಾಳು ಮೆಣಸು -1 ಚಮಚ, ಸಾಸಿವೆ, ಜೀರಿಗೆ -ಅರ್ಧ ಚಮಚ, ಎಣ್ಣೆ -4 ಚಮಚ, ಕೊತಂಬರಿ ಸೊಪ್ಪು.
ತಯಾರಿಸುವ ವಿಧಾನ:
ತರಕಾರಿ ಬೇಯಿಸಿದ ನೀರನ್ನು ಸ್ಟೀಲ್ ಪಾತ್ರೆಯಲ್ಲಿ ಹಾಕಿ, ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು ಹಾಕಬೇಕು. ಸಾಸಿವೆ, ಜೀರಿಗೆಯನ್ನು ಒಗ್ಗರಣೆ ಮಾಡಿ ಹಾಕಿರಿ.
ನಂತರ ಕೊತಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿ ಹಾಕಬೇಕು. ಲೋಟಕ್ಕೆ ಹಾಕಿಕೊಂಡು ಊಟ ಅಥವಾ ತಿಂಡಿ ತಿನ್ನುವ ಮೊದಲು ಕುಡಿಯಿರಿ.