ವಾಷಿಂಗ್ಟನ್: ಇತ್ತೀಚೆಗಷ್ಟೇ ಇಂಟರ್ ಮಿಮಿಯಾ ಕ್ಲಬ್ ಸೇರಿದ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ (Lionel Messi) ಸುರಕ್ಷತೆಗೆ ಎಂಎಂಎ ಫೈಟರ್ (MMA Fighter) ಹಾಗೂ ಮಾಜಿ ಸೈನಿಕನನ್ನ ಬಾಡಿಗಾರ್ಡ್ ಆಗಿ ನೇಮಿಸಲಾಗಿದೆ
ಮೆಸ್ಸಿಗೆ ಕಳೆದ ಕೆಲವು ದಿನಗಳಿಂದ ಬೆದರಿಕೆಗಳು ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ವೈಯಕ್ತಿಕ ಭದ್ರತೆಗಾಗಿ ಮಾಜಿ ಸೈನಿಕನೂ ಆಗಿರುವ ಎಂಎಂಎ ಫೈಟರ್ ಯಾಸಿನ್ ಚುಯೆಕೊ (Yassine Chueko) ಅವರನ್ನ ಬಾಡಿಗಾರ್ಡ್ ಆಗಿ ನೇಮಿಸಲಾಗಿದೆ.
ಮೆಸ್ಸಿ ಯುಎಸ್ನಲ್ಲಿ ಅತ್ಯಂತ ಜನಪ್ರಿಯ ಆಟಗಾರ, ಅವರನ್ನ ಗುರಿಯಾಗಿಸುವ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಮೆಸ್ಸಿ ಅವರ ಕುಟುಂಬಕ್ಕೆ ಸೇರಿದ ಸೂಪರ್ ಮಾರ್ಕೆಟ್ವೊಂದರ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಹಾಗಾಗಿ ಯಾಸಿನ್ ಚುಯೆಕೊ ಅವರನ್ನ ಬಾಡಿ ಗಾರ್ಡ್ ಆಗಿ ನೇಮಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಫಿಫಾ ವಿಶ್ವಕಪ್ ಟೂರ್ನಿ ಬಳಿಕ ಇತ್ತೀಚೆಗಷ್ಟೇ ಇಂಟರ್ ಮಿಯಾಮಿ ಕ್ಲಬ್ ಸೇರಿದ ಲಿಯೊನೆಲ್ ಮೆಸ್ಸಿ ಯುಎಸ್ ಲೀಗ್ನಲ್ಲಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಇಂಟರ್ ಮಿಯಾಮಿ ಕ್ಲಬ್ನ ಮೆಸ್ಸಿ ಬಾಡಿಗಾರ್ಡ್ ಆಗಿರುವ ಯಾಸಿನ್ ಚುಯೆಕೊ ಎಂಎಂಎ ಫೈಟರ್ ಕೂಡ ಆಗಿದ್ದರು. ಯುಎಸ್ ಸೈನಿಕನಾಗಿ ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಸೇವೆ ಸಲ್ಲಿಸಿದ್ದರು.