ರಾಜ್ಯದೆಲ್ಲೆಡೆ ಆಗಸ್ಟ್ 30 ರಕ್ಷಾ ಬಂಧನ (Raksha Bandhana) ಹಬ್ಬದ ಸಂಭ್ರಮ ಮನೆ ಮಾಡಿದೆ. ಹೀಗಿರುವಾಗ ತಮ್ಮ ಮನೆಯಲ್ಲಿ ಸಹೋದರ-ಸಹೋದರಿಯ ರಕ್ಷೆಯ ಹಬ್ಬ ಹೇಗಿತ್ತು ಎಂಬುದರ ಝಲಕ್ನ ನಟಿ ರಾಧಿಕಾ ಪಂಡಿತ್- ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragahti Shetty) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಯಥರ್ವ್- ಐರಾ ರಕ್ಷಾ ಬಂಧನದ ಆಚರಣೆ ಹೇಗಿತ್ತು ಎಂಬುದರ ಚೆಂದದ ಫೋಟೋವನ್ನ ಯಶ್ ಪತ್ನಿ ರಾಧಿಕಾ ಶೇರ್ ಮಾಡಿದ್ದಾರೆ. ಕೆಲವೊಮ್ಮೆ ಸಹದ್ಯೋಗಿಗಳು, ಕೆಲವೊಮ್ಮೆ ಪ್ರತಿಸ್ಪರ್ಧಿಗಳು, ಕೆಲವೊಮ್ಮೆ ರಕ್ಷಕರು ಆದರೆ ಯಾವಾಗಲೂ ಒಬ್ಬರಿಗೊಬ್ಬರು. ಎಲ್ಲಾ ಒಡಹುಟ್ಟಿದವರಿಗೆ ರಕ್ಷಾ ಬಂಧನದ ಶುಭಾಶಯಗಳು ಎಂದು ಮಕ್ಕಳ ಫೋಟೋಗೆ ಅಡಿಬರಹ ನೀಡಿ ರಾಧಿಕಾ ಪಂಡಿತ್(Radhika Pandit) ಪೋಸ್ಟ್ ಮಾಡಿದ್ದಾರೆ. ಪಿಂಕ್ ಬಣ್ಣದ ಉಡುಗೆಯಲ್ಲಿ ಐರಾ- ಯಥರ್ವ್ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ರಿಷಬ್ ಶೆಟ್ಟಿ (Rishab Shetty) ಮಕ್ಕಳ ರಕ್ಷಾ ಹಬ್ಬದ ಆಚರಣೆ ಹೇಗಿತ್ತು? ಈ ವಿಶೇಷ ಫೋಟೋಗಳನ್ನ ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಶೇರ್ ಮಾಡಿದ್ದಾರೆ. ಅಣ್ಣ-ತಂಗಿಯರ ಶಾಶ್ವತ ಬಂಧದ ಸಡಗರಕ್ಕೆ ಸಾಕ್ಷಿಯಾಗುವ ರಕ್ಷಾ ಬಂಧನದ ಶುಭಾಶಯಗಳು ಎಂದು ಪ್ರಗತಿ ಶೆಟ್ಟಿ ಅಡಿಬರಹ ನೀಡಿ ಮಕ್ಕಳ ಮುದ್ದಾದ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಸ್ಟಾರ್ ಮಕ್ಕಳ ರಕ್ಷಾ ಬಂಧನದ ಆಚರಣೆಯ ಫೋಟೋ ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.