ಕೇವಲ ಮುಖದ ಕಾಂತಿಯನ್ನು ಹೆಚ್ಚಿಸಿಕೊಂಡರೆ ಸಾಲದು. ತುಟಿಯ ಬಗ್ಗೆಯೂ ಗಮನವಿರಬೇಕು. ಚಳಿಗಾಲ ಮತ್ತು ಬೇಸಿಗೆ ಕಾಲದಲ್ಲಿ ತುಟಿಯ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಗಮನಹರಿಸದೆ ಹೋದರೆ ತುಟಿ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ತುಟಿ ಕಪ್ಪಾದರೆ ಮುಖದ ಸೌಂದರ್ಯ ಕಡಿಮೆಯಾಗುತ್ತದೆ.ನೈಸರ್ಗಿಕ ಗುಲಾಬಿ ವರ್ಣದ ತುಟಿಗಳನ್ನು ಪಡೆಯಲು ಮನೆಮದ್ದು ಇಲ್ಲಿದೆ ನೋಡಿ
ಪೆಟ್ರೋಲಿಯಂ ಜೆಲ್ಲಿ ಅಥವಾ ಆಲಿವ್ ತೈಲ ಹಾಕಿಕೊಂಡು ತುಟಿಗಳನ್ನು ಬ್ರಶ್ ಮಾಡಿದರೆ ಆಗ ಇದು ತುಟಿಗಳ ಮೇಲಿನ ಸತ್ತ ಅಂಗಾಂಶಗಳನ್ನು ಕಿತ್ತು ಹಾಕುವುದು ಮತ್ತು ಬಣ್ಣ ನೀಡುವುದು.
- ಮೂರರಿಂದ ನಾಲ್ಕು ನಿಮಿಷ ಕಾಲ ಬ್ರಶ್ ನ್ನು ವೃತ್ತಾಕಾರದಲ್ಲಿ ಹಾಗೆ ತಿರುಗಿಸಿ. ಇದರ ಬಳಿಕ ಉಗುರುಬೆಚ್ಚಗಿನ ನೀರಿನಿಂದ ತುಟಿಗಳನ್ನು ತೊಳೆಯಿರಿ ಮತ್ತು ದೇಶೀಯ ತುಪ್ಪ ಹಚ್ಚಿಕೊಂಡರೆ ಮೊಶ್ಚಿರೈಸ್ ಆಗಿರುವುದು.
- ತುಟಿಗಳಲ್ಲಿನ ಸತ್ತ ಅಂಗಾಂಶಗಳನ್ನು ಕಿತ್ತು ಹಾಕಲು ಇದು ಮತ್ತೊಂದು ವಿಧಾನವಾಗಿದೆ. ಒಂದು ಚಮಚ ಸಕ್ಕರೆ, ಕೆಲವು ಹನಿ ಆಲಿವ್ ತೈಲ ಮತ್ತು ಲಿಂಬೆಯನ್ನು ಮಿಶ್ರಣ ಮಾಡಿಕೊಳ್ಳಿ.
- ಈ ಪೇಸ್ಟ್ನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ನಿಧಾನವಾಗಿ ಮಸಾಜ್ ಮಾಡಿಕೊಂಡರೆ ಆಗ ತುಟಿಗಳಿಗೆ ಬಣ್ಣ ಮರಳಿ ಬರುವುದು. ಸಕ್ಕರೆಯು ಖಾಲಿ ಆದ ಬಳಿಕ ನೀರಿನಿಂದ ತುಟಿಗಳನ್ನು ತೊಳೆಯಿರಿ.
- ಇದು ಒಳ್ಳೆಯ ಬ್ಲೀಚಿಂಗ್ ಗುಣಗಳು ಹಾಗೂ ಮೊಶ್ಚಿರೈಸ್ ನ್ನು ಹೊಂದಿದೆ. ಲಿಂಬೆಯು ತುಟಿಗಳಿಗೆ ಬಣ್ಣ ನೀಡುವುದು ಮತ್ತು ಜೇನುತುಪ್ಪವು ತುಟಿಗಳಿಗೆ ಪೋಷಣೆ ನೀಡಿ ನಯವಾಗಿಸುವುದು.
- ಜೇನುತುಪ್ಪ ಮತ್ತು ಲಿಂಬೆಯನ್ನು ಸಮ ಪ್ರಮಾಣದಲ್ಲಿ ಬೆರೆಸಿಕೊಂಡು ಈ ಪೇಸ್ಟ್ ಮಾಡಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. 20-30 ನಿಮಿಷ ಕಾಲ ಹಾಗೆ ಇದನ್ನು ಬಿಡಿ. ಇದ ಬಳಿಕ ಸಾಮಾನ್ಯ ನೀರಿನಿಂದ ತೊಳೆಯಿರಿ.
- ಇದರಲ್ಲಿ ಬಾದಾಮಿ ಮತ್ತು ಜೇನುತುಪ್ಪದ ಕೆಲವೊಂದು ಒಳ್ಳೆಯ ಗುಣಗಳು ಸೇರಿಕೊಂಡು ತುಟಿಗಳಿಗೆ ಬಣ್ಣ ನೀಡುವುದು.
- ಬಾದಾಮಿ ಎಣ್ಣೆಯನ್ನು ಜೇನುತುಪ್ಪದ ಜತೆಗೆ ಸಮ ಪ್ರಮಾಣದಲ್ಲಿ ಸೇರ್ಪಡೆ ಮಾಡಿದರೆ ಆಗ ತುಟಿಗಳಿಗೆ ಬಣ್ಣ ಬರುವುದು. ಇದನ್ನು 30 ನಿಮಿಷ ಕಾಲ ತುಟಿಗಳಲ್ಲಿ ಹಾಗೆ ಇರಲು ಬಿಡಿ ಮತ್ತು ಇದರ ಬಳಿಕ ನೀರಿನಿಂದ ತೊಳೆಯಿರಿ. ಇದನ್ನು ದಿನದಲ್ಲಿ ಮೂರರಿಂದ ನಾಲ್ಕು ಸಲ ಹಚ್ಚಿಕೊಳ್ಳಿ.
- ತುಟಿಗಳ ಬಣ್ಣ ವೃದ್ಧಿಸಲು ಬೀಟ್ ರೂಟ್ ನ್ನು ತುಂಬಾ ಹಿಂದಿನಿಂದಲೂ ಬಳಕೆ ಮಾಡಿಕೊಂಡು ಬರಲಾಗುತ್ತಿದೆ. ಬೀಟ್ರೂಟ್ ತುಟಿಗಳಿಗೆ ಬಣ್ಣ ನೀಡುವುದು ಮಾತ್ರವಲ್ಲದೆ, ಇದು ಸಂಪೂರ್ಣ ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
- ಬೀಟ್ ರೂಟ್ನ್ನು ತುರಿದುಕೊಳ್ಳೀ ಮತ್ತು ಅದಕ್ಕೆ ಸ್ವಲ್ಪ ಲಿಂಬೆ ರಸ ಹಾಗೂ ಹಾಲಿ ಕೆನೆ ಹಾಕಿ. ಇದನ್ನು ಪೇಸ್ಟ್ ಮಾಡಿಕೊಂಡು ತುಟಿಗಳಿಗೆ ಹಚ್ಚಿ ಮತ್ತು 15-20 ನಿಮಿಷ ಬಿಟ್ಟು ತೊಳೆಯಿರಿ.