ಇಸ್ಲಾಮಾಬಾದ್: : ಪಾಕಿಸ್ತಾನ ಇತಿಹಾಸದಲ್ಲಿ ಇದೆ ಮೊದಲ ಭಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 300 ರೂ. ಗಡಿ ದಾಟಿದೆ. ನಿನ್ನೆ ಸಂಜೆ ಹೊಸ ಬೆಲೆ ಬಿಡುಗಡೆ ಮಾಡಿದ ಹಣಕಾಸು ಸಚಿವಾಲಯ, ಅದ್ರಲ್ಲಿ, ಪೆಟ್ರೋಲ್ ಬೆಲೆ ₹ 14.91, ಹೈಸ್ಪೀಡ್ ಡೀಸೆಲ್ (HSD) ಬೆಲೆಯನ್ನು ₹ 18.44 ರಷ್ಟು ಹೆಚ್ಚಿಸಲಾಗಿದೆ ಎಂದು ಘೋಷಿಸಿದೆ. ಈಗ ಪೆಟ್ರೋಲ್ ಬೆಲೆ ₹305.36 ರಷ್ಟಿದ್ದರೆ, ಡೀಸೆಲ್ ಬೆಲೆ ₹311.84 ತಲುಪಿದೆ. ನಿರಂತರವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಪಾಕಿಸ್ತಾನಕ್ಕೆ, ಈಗ ಮತ್ತೊಂದು ಸಮಸ್ಯೆಗೆ ಎದುರಾಗಿದೆ.
ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿದ್ದಾರೆ.ಇತ್ತೀಚೆಗೆ ಪಾಕಿಸ್ತಾನದಲ್ಲಿ ವಿದ್ಯುತ್ ಬಿಲ್ ಹೆಚ್ಚಳವಾಗಿದಕ್ಕೆ ಅನೇಕ ಸ್ಥಳಗಳಲ್ಲಿ ತಮ್ಮ ಬಿಲ್ಲುಗಳನ್ನು ಸುಟ್ಟು ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಯ ಕುರಿತ ಸಭೆ ನಡೆದರೂ ಸಹ ಇಲ್ಲಿಯವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಹೀಗಿರುವಾಗ ಪೆಟ್ರೋಲ್ ಡಿಸೇಲ್ ಬೆಲೆ ಜಾಸ್ತಿಯಾಗಿರುವುದು ಜನರ ನಿದ್ದೆಗೆಡಿಸಿದೆ.