ಕಾಳುಮೆಣಸು ಖಾರವಾದ ಮಸಾಲೆ ವಸ್ತುವಾಗಿದ್ದು ಆಹಾರಕ್ಕೆ ರುಚಿ ನೀಡುವ ಜೊತೆಗೇ ಆರೋಗ್ಯಕ್ಕೂ ಹಲವು ಬಗೆಯಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯ ಜ್ವರ ಕೆಮ್ಮು, ಶೀತ ಗಳಿಗೆ ಔಷಧಿಯಾಗಿ ನೀಡುವ ಕಷಾಯದಲ್ಲಿ ಕಾಳುಮೆಣಸಿನ ಪಾತ್ರ ಮಹತ್ತರದ್ದಾಗಿದೆ. ಇದರ ಜೊತೆಗೇ ಜೀರ್ಣಕ್ರಿಯೆಗೂ ಕಾಳುಮೆಣಸು ಸಹಕಾರಿಯಾಗಿದೆ.
ಜಠರ ಮತ್ತು ಕರುಳುಗಳಲ್ಲಿ ಆಹಾರ ಸಾಗುವಾಗ ಎದುರಾಗುವ ಅಜೀರ್ಣತೆಯ ಸಮಸ್ಯೆಗಳನ್ನು ನಿವಾರಿಸಲೂ ಸಹಕಾರಿಯಾಗಿದೆ. ಅಷ್ಟು ಮಾತ್ರವಲ್ಲ, ನಿಮ್ಮ ರಕ್ತದೊತ್ತಡ (ಅಧಿಕ ರಕ್ತದೊತ್ತಡ) ಮತ್ತು ಇತರ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲೂ ಇದು ತನ್ನ ಅಮೂಲ್ಯ ಗುಣಗಳಿಂದ ಸಹಕರಿಸುತ್ತದೆ.
ಆದರೆ ಕಾಳುಮೆಣಸು ನಿಮ್ಮ ಕೂದಲಿಗೂ ಉಪಯುಕ್ತವಾಗಿದೆ ಎಂದು ನಿಮಗೆ ತಿಳಿದಿದೆಯೇ? ತಲೆಹೊಟ್ಟು ಮತ್ತು ಕೂದಲು ಉದುರುವುದು ಋತುಮಾನದಲ್ಲಿಯೂ ಕಾಡುವ ಸಾಮಾನ್ಯ ಸಮಸ್ಯೆಗಳಾಗಿವೆ. ಆದರೆ ಈ ಸಮಸ್ಯೆಗಳಿಗೆ ಚಿಕಿತ್ಸೆಯಾಗಿ ನೀವು ಕಾಳುಮೆಣಸನ್ನು ಬಳಸಬಹುದು ಎಂದು ಇದಕ್ಕೂ ಮುನ್ನ ನಿಮಗೆ ತಿಳಿದಿತ್ತೇ?
ಕಾಳುಮೆಣಸು ನಿಮ್ಮ ಕೂದಲು ನೆರೆಯುವುದನ್ನು ತಡವಾಗಿಸಲು ಸಹ ಸಹಾಯ ಮಾಡುತ್ತದೆ. ಕೂದಲ ಆರೈಕೆಗೆ ನೀವು ಕಾಳು ಮೆಣಸನ್ನು ಹಲವು ವಿಧಗಳಲ್ಲಿ ಬಳಸಬಹುದು. ಕಾಳುಮೆಣಸನ್ನು ಕೆಲವು ಸರಳ ಕೂದಲ ರಕ್ಷಣೆಗಾಗಿ ಹೇಗೆ ಭಿನ್ನ ರೂಪಗಳಲ್ಲಿ ಬಳಸಬಹು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ. ಕೂದಲ ಆರೈಕೆಯ ಉಪಾಯಗಳು
ಕೂದಲುಬಿಳಿಯಾಗಿದ್ದರೆ / ನೆರೆಯುತ್ತಿದ್ದರೆಮೊಸರುಮತ್ತುಕಾಳುಮೆಣಸಿನಆರೈಕೆ
ನಿಮ್ಮ ಕೂದಲು ಅಕಾಲಿಕವಾಗಿ ನೆರೆದಿದ್ದರೆ, ನಿಮ್ಮ ಕೂದಲಿಗೆ ಕಾಳುಮೆಣಸಿನೊಂದಿಗೆ ಮೊಸರಿನಿಂದ ಮಾಡಿದ ಕೂದಲ ಲೇಪವನ್ನು ಬಳಸಬಹುದು. ಕಾಳುಮೆಣಸು ತಾಮ್ರದ ಅಂಶದಿಂದ ಸಮೃದ್ಧವಾಗಿರುವ ಕಾರಣ ಕೂದಲು ಅಕಾಲಿಕವಾಗಿ ನೆರೆಯುವುದನ್ನು ತಡೆಯುತ್ತದೆ.
ಮೊಸರು ನಿಮ್ಮ ಕೂದಲಿಗೆ ಆರ್ದ್ರತೆ ನೀಡುತ್ತದೆ ಮತ್ತು ವಿಟಮಿನ್ ಸಿ ಕೊರತೆಯನ್ನು ಪೂರೈಸಿ ಕೂದಲು ಸೊಂಪಾಗಿ ಬೆಳೆಯಲು ಎಲ್ಲಾ ಬಗೆಯ ನೆರವನ್ನು ನೀಡುತ್ತದೆ.
ಅದಕ್ಕಾಗಿಅಗತ್ಯವಿರುವಸಮಾಗ್ರಿಗಳು
- ಒಂದು ಕಪ್ ಮೊಸರು. ಕೂದಲ ಉದ್ದವನ್ನು ಪರಿಗಣಿಸಿ ಈ ಪ್ರಮಾಣವನ್ನು ಹೆಚ್ಚಿಸಬೇಕು.
- ಇದಕ್ಕೆ 1-2 ಚಿಕ್ಕ ಚಮಚ ಕಾಳುಮೆಣಸಿನ ಪುಡಿಯನ್ನು ಹಾಕಿ ಚೆನ್ನಾಗಿ ಬೆರೆಸಿ.
- ಬಳಿಕ ಒಂದು ಚಿಕ್ಕ ಚಮಚ ಜೇನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ಕೂದಲು ಪೂರ್ಣವಾಗಿ ಆವರಿಸುವಂತೆ ಹಚ್ಚಿ ಮೊದಲು ನೆತ್ತಿಯ ಮೇಲೆ ಹಚ್ಚಿಕೊಂಡು ಬಳಿಕ ಕೂದಲ ತುದಿಯವರೆಗೆ ಬರುವಂತೆ ಹಚ್ಚಿಕೊಳ್ಳಿ.
- ಸುಮಾರು 20-30 ನಿಮಿಷಗಳ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಂಡು ಒಣಗಿಸಿ.
- ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಅಥವಾ ಎರಡು ಬಾರಿ ಪುನರಾವರ್ತಿಸಿ.
ತಲೆಹೊಟ್ಟಿನಸಮಸ್ಯೆಇದ್ದರೆಕಾಳುಮೆಣಸುಮತ್ತುಆಲಿವ್ಎಣ್ಣೆಯಆರೈಕೆಪಡೆಯಿರಿ
ಹವಾಮಾನ ಬದಲಾವಣೆಯ ಸಮಯದಲ್ಲಿ ಪ್ರತಿ ಇಬ್ಬರಲ್ಲಿ ಒಬ್ಬ ವ್ಯಕ್ತಿ ತಲೆಹೊಟ್ಟಿನ ಸಮಸ್ಯೆಯಿಂದ ಬಳಲುತ್ತಾರೆ. ನೀವು ಉದ್ದ ಕೂದಲು ಹೊಂದಿದ್ದರೆ, ನಿಮ್ಮ ಕೂದಲನ್ನು ತೊಳೆಯಲು ನೀವು ಹೆಚ್ಚು ಸಮಯವನ್ನು ತೆಗೆದುಕೊಳ್ಳುಬೇಕಾಗುತ್ತದೆ.
ಆದರೆ ನೀವು ಈ ಆರೈಕೆಯ ವಿಧಾನವನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಿದರೆ, ನೀವು ತಲೆಹೊಟ್ಟಿನಿಂದ ಶೀಘ್ರವೇ ಮುಕ್ತಿ ಪಡೆಯಬಹುದು.
ಇದಕ್ಕಾಗಿಆಗತ್ಯವಿರುವಸಮಾಗ್ರಿಗಳು
- ಒಂದು ಕಪ್ ನಲ್ಲಿ ಒಂದು ಚಿಕ್ಕ ಚಮಚ ಕಾಳುಮೆಣಸಿನ ಪುಡಿ ಹಾಕಿ
- ಇದಕ್ಕೆ ತಣ್ಣನೆಯ ವಿಧಾನದಿಂದ ಹಿಂಡಲ್ಪಟ್ಟ (cold processed) ಅಪ್ಪಟ (virgin olive oil) ಆಲಿವ್ ಎಣ್ಣೆಯನ್ನು ಬೆರೆಸಿ. (ಆಲಿವ್ ಎಣ್ಣೆಯಲ್ಲಿ ಪೊಮೇಸ್ ಎಣ್ಣೆ ಬೆರೆತಿರಬಾರದು, ಈ ಅಂಶವನ್ನು ಖಚಿತಪಡಿಸಿಕೊಳ್ಳಿ)
- ಇದನ್ನು ಚೆನ್ನಾಗಿ ಬೆರೆಸಿದ ಬಳಿಕ ಒಂದು ಲಿಂಬೆಯ ರಸವನ್ನು ಹಾಕಿ ಮಿಶ್ರಣ ಮಾಡಿ.
- ಈ ಲೇಪವನ್ನು ನೆತ್ತಿಯ ಚರ್ಮಕ್ಕೆ ಚೆನ್ನಾಗಿ ತಾಕುವಂತೆ ಬೆರಳುಗಳಿಂದ ಮಸಾಜ್ ಮಾಡುತ್ತಾ ಇಡಿಯ ತಲೆಗೆ ಹಚ್ಚಿಕೊಳ್ಳಿ. ಮುಂದಿನ ಒಂದು ಘಂಟೆ ಹಾಗೇ ಇರಿಸಿ. ರಾತ್ರಿ ಮಲಗುವ ಮುನ್ನ ಹಚ್ಚಿ ಬೆಳಗ್ಗಿನವರೆಗೂ ಹಾಗೇ ಬಿಟ್ಟರೆ ಇನ್ನೂ ಒಳ್ಳೆಯದು. ಬಳಿಕ ಕೇವಲ ತಣ್ಣೀರಿನಿಂದ ಸ್ನಾನ ಮಾಡಿ. ಈ ವಿಧಾನದಿಂದ ತಲೆಹೊಟ್ಟು ಶೀಘ್ರವೇ ಇಲ್ಲವಾಗುತ್ತದೆ.
- ಈ ಕಾಳುಮೆಣಸು ಆಲಿವ್ ಎಣ್ಣೆಯ ತಲೆಹೆ ಹಚ್ಚಿಕೊಳ್ಳುವ ಲೇಪವು ಹೇರಳವಾದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ನಿಮ್ಮ ನೆತ್ತಿಯನ್ನು ಸ್ವಚ್ಛವಾಗಿಡಲು ಸಹಾಯ ಮಾಡುತ್ತದೆ ಮತ್ತು ಇನ್ನೂ ಹೊಸದಾಗಿ ತಲೆಹೊಟ್ಟು ರೂಪುಗೊಳ್ಳುವುದನ್ನು ತಡೆಯುತ್ತದೆ.
ನೀಳವಾದಮತ್ತುಸೊಂಪಾದಕೂದಲಿಗಾಗಿ
- ಈಗ ನೀವು ನೀಳವಾದ, ಸೊಂಪಾದ ಮತ್ತು ಪುಟಿಯುವಂತಹ ಕೂದಲನ್ನು ಬಯಸಿದರೆ, ಕಾಳುಮೆಣಸು ಸಹ ಇದನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಏಕೆಂದರೆ ಇದು ನಿಮ್ಮ ಕೂದಲಿನ ಬುಡಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
- ಇದಕ್ಕಾಗಿ ಸಮಪ್ರಮಾಣದಲ್ಲಿ ಆಲಿವ್ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಕಾಳುಮೆಣಸು ಪುಡಿಯನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಈಗ ಅದನ್ನು ಎರಡು ವಾರಗಳವರೆಗೆ ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಿ.
- ಎರಡು ವಾರಗಳ ನಂತರ, ನೀವು ಈ ಎಣ್ಣೆಯನ್ನು ನಿಮ್ಮ ಕೂದಲಿಗೆ ಹಚ್ಚಿ 30 ನಿಮಿಷಗಳ ಕಾಲ ಹಾಗೇ ಇರಿಸಿ. ಇದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ನೀವು ಬಯಸಿದರೆ, ಆಲಿವ್ ಎಣ್ಣೆಯ ಬದಲಿಗೆ ತೆಂಗಿನ ಎಣ್ಣೆಯೊಂದಿಗೂ ಕಾಳುಮೆಣಸನ್ನು ಬಳಸಬಹುದು. ಈ ಅಗ್ಗದ ಮನೆಮದ್ದು ನಿಮ್ಮ ಕೂದಲನ್ನು ಹೊಳೆಯುವಂತೆ ಮತ್ತು ಆರೋಗ್ಯಕರವಾಗಿಸಲು ನೆರವಾಗುತ್ತದೆ.
- ಉತ್ತಮ ಪರಿಣಾಮಕ್ಕಾಗಿ ವಾರಕ್ಕೊಂದು ಬಾರಿ ಪುನರಾವರ್ತಿಸಿ.