ಬೆಂಗಳೂರು: ಗ್ಯಾರಂಟಿ ಭಾಗ್ಯಗಳನ್ನ ಕೊಟ್ಟ ಕಾಂಗ್ರೆಸ್ ಸರ್ಕಾರ ಜನರಿಗೆ ತೆರಿಗೆ ಹೊರೆಯನ್ನು ನೀಡ್ತಿದೆ. ಗ್ಯಾರಂಟಿ ಭಾಗ್ಯಗಳಿಗೆ ಆಗುವ ವೆಚ್ಚವನ್ನು ಸರಿದೂಗಿಸಲು ಬೆಲೆ ಏರಿಕೆ ಮಾಡಲಿಕ್ಕೆ ಹೊರಟಂತಿದೆ.ಇದರ ಪರಿಣಾಮ ಎನ್ನುವಂತೆ ವಿದ್ಯುತ್ ದರ ಮತ್ತೆ ಏರಿಸಿದೆ.
ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ.ತರಕಾರಿ ಬೇಳೆಕಾಳು,ನಂದಿನಿ ಹಾಲು,ಹೋಟೆಲ್ ಊಟ ತಿಂಡಿ ದರ ಬಲು ದುಬಾರಿಯಾಗಿದೆ.ಇದ್ರ ನಡುವೆ ಮತ್ತೆ ಸೆಪ್ಟೆಂಬರ್ 1 ರಿಂದ ಅಂದರೆ ಇಂದಿನಿಂದ ಅನ್ವಯವಾಗುವಂತೆ ವಿದ್ಯುತ್ ದರ ಏರಿಸಿ ಆದೇಶ ಹೊರಡಿಸಲಾಗಿದೆ..
ವಿದ್ಯುತ್ ಸರಬರಾಜು ಮಾಡೋ ಎಲ್ಲಾ ಎಸ್ಕಾಂಗಳು ಸರ್ಕಾರದ ಮುಂದೆ ವಿದ್ಯುತ್ ದರ ಏರಿಕೆಯ ಪ್ರಸ್ತಾಪ ಇಟ್ಟಿದ್ವು.ಯೂನಿಟ್ ಮೇಲೆ ಎಷ್ಟು ಹೆಚ್ಚಳ ಮಾಡಬೇಕೆನ್ನುವ ಸಲಹೆಯನ್ನೂ ನೀಡಿದ್ವು.ಬಜೆಟ್ ಮುಗಿಯುವವರೆಗೂ ಬೇಡ ಎಂದಿದ್ದ ಸರ್ಕಾರ ಬಜೆಟ್ ಮುಗಿಯುತ್ತಿದ್ದಂತೆ ವಿದ್ಯುತ್ ದರ ಏರಿಕೆಗೆ ಹೆಚ್ಚು ಒತ್ತು
ನೀಡಿದಂತಿದೆ.ಎಸ್ಕಾಂಗಳ ಸಲಹೆಯಂತೆ ಪ್ರತಿ ಯೂನಿಟ್
ಯಾವ್ಯಾವ ಕಂಪನಿ ಎಷ್ಟು ದರ ಹೆಚ್ಚಳ.
ಬೆಸ್ಕಾಂ -ವ್ಯಾಪ್ತಿಯಲ್ಲಿ 1.ರೂ 15 ರೂ. ಪ್ರತಿ ಯೂನಿಟ್ ಹೆಚ್ಚಳ ಮಾಡಲಾಗಿದೆ.ಮೆಸ್ಕಾಂ -1.35 ಪೈಸೆ
ಸೆಸ್ಕ್ಂ- 82 ಪೈಸೆ
ಹೆಸ್ಕಾಂ 1.69 ಪೈಸೆ
ಜೆಸ್ಕಾಂ – 70 ಪೈಸೆ ಪ್ರತಿ ಯೂನಿಟ್ ಗೆ ಹೆಚ್ಚಳ
ಇಂಧನ ಮತ್ತು ವಿದ್ಯುತ್ ಶುಲ್ಕ ಹೊಂದಾಣಿಕೆಗಾಗಿ ದರ ಏರಿಕೆ ಅನಿವಾರ್ಯ ಎನ್ನಲಾಗ್ತಿದೆ.
ಆದರೆ ವಿದ್ಯುತ್ ಏರಿಕೆಯಿಂದ ಗೃಹಜ್ಯೋತಿ ಯೋಜನೆ ವ್ಯಾಪ್ತಿಗೊಳಪಡುವವರಿಗೆ ಯಾವುದೇ ಪ್ರಾಬ್ಲಂ ಆಗೊಲ್ಲ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ. ಆದರೆ ಕೈಗಾರಿಕೆಗಳು, ಯಾರೂ ಫಲಾನುಭವಿಗಳು ಇಲ್ಲವೋ ಅವರಿಗೆ ಕರೆಂಟ್ ಬೆಲೆ ಏರಿಕೆ ಬಿಸಿ ತಟ್ಟಲಿದೆ.ಏಕಂದ್ರೆ ಈಗಲೇ ಕರೆಂಟ್ ದರ ಹೆಚ್ಚಳವಾಗಿರೋದನ್ನೇ ಅವರು ಅರಗಿಸಿಕೊಳ್ಳಲಾಗ್ತಿಲ್ಲ.
ಈ ನಡುವೆ ಮತ್ತಷ್ಟು ದರ ಹೆಚ್ಚಳ ಅತಂಕ ಹುಟ್ಟಿಸಿದೆ.ಗ್ಯಾರಂಟಿ ಭಾಗ್ಯಗಳಿಗೆ ಆಗುವ ಆರ್ಥಿಕ ಹೊರೆ ಬ್ಯಾಲೆನ್ಸ್ ಮಾಡಲು ಒಂದೊಂದೇ ನಿತ್ಯಪಯೋಗಿ ವ್ಯವಸ್ಥೆಗಳ ಮೇಲೆ ಹೊರೆಯ ಹೊಡೆತ ನೀಡುತ್ತಿರುವುದು ಮಾತ್ರ ಸಾರ್ವಜನಿಕರನ್ನು ಅಸಮಾಧಾನಗೊಳಿಸಿದೆ.