ನಿಯಮಿತವಾಗಿ ಬ್ರಶ್ ಮಾಡುವುದರಿಂದ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ ದಿನಕ್ಕೆ ಎರಡರಿಂದ ಮೂರು ಬಾರಿ ಬ್ರಶ್ ಮಾಡುವುದರಿಂದ ಹೃದಯ ವೈಫಲ್ಯತೆಯ ಸಾಧ್ಯತೆ 10% ನಷ್ಟು ಹಾಗೂ ಹೃದಯಾಘಾತದ ಪ್ರಮಾಣವನ್ನು 12% ನಷ್ಟು ಕಡಿಮೆ ಮಾಡುತ್ತದೆಂದು, ಅಧ್ಯಯನಗಳು ತಿಳಿಸಿವೆ.
ದಿನಕ್ಕೆ ಮೂರು ಅಥವಾ ಹೆಚ್ಚು ಬಾರಿ ಬ್ರಶ್ ಮಾಡುವುದರಿಂದ ಅಸಹಜ ಹೃದಯಬಡಿತ ಹಾಗೂ ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ, ಎಂದು ದಕ್ಷಿಣ ಕೊರಿಯಾದಲ್ಲಿ ನಡೆದ ಅಧ್ಯಯನ ತಿಳಿಸಿದೆ. ಹಿಂದಿನ ಅಧ್ಯಯನಗಳು ದುರ್ಬಲವಾದ ಬಾಯಿಯ ನೈರ್ಮಲ್ಯ ರಕ್ತದಲ್ಲಿ ಬ್ಯಾಕ್ಟೀರಿಯಾ ಹೆಚ್ಚಾಗಲು ಕಾರಣವಾಗುವುದರಿಂದ, ಶರೀರದಲ್ಲಿ ಉರಿಯೂತ ಉಂಟಾಗುತ್ತದೆಂದು ಸಂಶೋಧಕರು ಹೇಳಿದ್ದಾರೆ.
ಉರಿಯೂತ ಎನ್ನುವುದು ಹೃದಯ ವೈಫಲ್ಯ, ಅಥವಾ ಅಸಹಜ ಹೃದಯ ಬಡಿತ ಮತ್ತು ಹೃದಯ ರಕ್ತವನ್ನು ಪಂಪ್ ಮಾಡುವ ಸಾಮರ್ಥ್ಯ ಅಥವಾ ವಿಶ್ರಮಿಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುವ ಮೂಲಕ, ಅಸಹಜವಾಗಿ ರಕ್ತದಿಂದ ತುಂಬಿಕೊಳ್ಳುವ ಮೂಲಕ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ. ಪ್ರಿವೆಂಟೀವ್ ಕಾರ್ಡಿಯಾಲಜಿಯ ಯೂರೋಪಿಯನ್ ಜರ್ನಲ್ ನಲ್ಲಿ ಸೋಮವಾರ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ಮೌಖಿಕ ನೈರ್ಮಲ್ಯ ಮತ್ತು ಈ ಎರಡು ಸ್ಥಿತಿಗಳ ನಡುವಿನ ಸಂಪರ್ಕವನ್ನು ಪರೀಕ್ಷಿಸಿದೆ.
ಸಂಶೋಧನೆಯಲ್ಲಿ ಯಾವುದೇ ಹೃದಯ ವೈಫಲ್ಯತೆ ಅಥವಾ ಹೃದಯಾಘಾತದ ಇತಿಹಾಸ ಹೊಂದಿಲ್ಲದ ಕೊರಿಯನ್ ರಾಷ್ಟ್ರೀಯ ಆರೋಗ್ಯ ವಿಮಾ ವ್ಯವಸ್ಥೆ 40 ರಿಂದ 79 ವರ್ಷದ ನಡುವಿನ 161,286 ಪ್ರಯೋಗಾರ್ಥಿಗಳನ್ನು ನೋಂದಾಯಿಸಿತ್ತು. ಪ್ರಯೋಗಾರ್ಥಿಗಳು 2003 ಮತ್ತು 2004 ರ ನಡುವೆ ನಿಯಮಿತ ವೈದ್ಯಕೀಯ ಪರೀಕ್ಷೆಗೆ ಒಳಗಾಗಿದ್ದರು. ಎತ್ತರ, ತೂಕ, ಪ್ರಯೋಗಾಲಯ ಪರೀಕ್ಷೆಗಳು, ಖಾಯಿಲೆ, ಜೀವನಶೈಲಿ, ಮೌಖಿಕ ಆರೋಗ್ಯ, ಮತ್ತು ಮೌಖಿಕ ನೈರ್ಮಲ್ಯ
ವರ್ತನೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು.
10.5 ವರ್ಷಗಳ ಅನುಸರಣೆಯಲ್ಲಿ, 4,911 (3%) ಪ್ರಯೋಗಾರ್ಥಿಗಳಲ್ಲಿ ಹೃದಯ ವೈಫಲ್ಯತೆ ಮತ್ತು 7,971 (4.9%) ಪ್ರಯೋಗಾರ್ಥಿಗಳಲ್ಲಿ ಹೃದಯಾಘಾತ ಕಂಡುಬಂದಿದೆ. ದಿನದಲ್ಲಿ ಮೂರು ಅಥವಾ ಹೆಚ್ಚಿನ ಬಾರಿ ಹಲ್ಲುಜ್ಜುವುದರಿಂದ ಹೃದಯ ವೈಫಲ್ಯತೆಯ ಅಪಾಯ 10% ನಷ್ಟು ಹಾಗೂ ಹೃದಯಾಘಾತದ ಅಪಾಯ 12% ನಷ್ಟು ಕಡಿಮೆಯಾಗುತ್ತದೆಂದು, ಅಧ್ಯಯನ ಹೇಳಿದೆ.
ದಕ್ಷಿಣ ಕೊರಿಯಾದ ಇಹ್ವಾ ವಿಮೆನ್ಸ್ ವಿಶ್ವವಿದ್ಯಾನಿಲಯದ ಹಿರಿಯ ಲೇಖಕ, ತೇ-ಜಿನ್-ಸಂಗ್, ವಿಶ್ಲೇಷಣೆ ಕೇವಲ ಒಂದು ದೇಶಕ್ಕೆ ಸೀಮಿತವಾಗಿದ್ದು, ಮೇಲ್ವಿಚಾರಣಾ ಅಧ್ಯಯನ ಪರಿಣಾಮದಾಯಕತೆಯನ್ನು ರುಜುವಾತು ಪಡಿಸಿಲ್ಲ. ನಾವು ಮುಂದಿನ ದಿನಗಳಲ್ಲಿ ಹೆಚ್ಚಿನ ಗುಂಪುಗಳನ್ನು ಅಧ್ಯಯನ ಮಾಡಲಿದ್ದು, ಇದು ನಮ್ಮ ಫಲಿತಾಂಶಗಳಿಗೆ ಮತ್ತಷ್ಟು ಬಲ ನೀಡಲಿದೆ ಎಂದು ಹೇಳಿದ್ದಾರೆ.
ಫಲಿತಾಂಶಗಳು ವಯಸ್ಸು, ಲಿಂಗ, ಸಾಮಾಜಿಕ ಆರ್ಥಿಕ ಸ್ಥಾನಮಾನ, ನಿಯಮಿತ ವ್ಯಾಯಾಮ, ಮದ್ಯಪಾನ ಸೇವನೆ, ಬಾಡಿ ಮಾಸ್ ಇಂಡೆಕ್ಸ್, ಮತ್ತು ಅಧಿಕ ರಕ್ತದೊತ್ತಡದಂತಹ ಅಸಹಜತೆಗಳೂ ಸೇರಿದಂತೆ ಅನೇಕ ಅಂಶಗಳಿಂದ ಸ್ವತಂತ್ರವಾಗಿದೆ, ಎಂದು ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನ ಯಾಂತ್ರಿಕತೆಯನ್ನು ಪರಿಶೋಧನೆ ಮಾಡಿಲ್ಲವಾದ್ದರಿಂದ, ಆಗಾಗ್ಗೆ ಹಲ್ಲು ಉಜ್ಜುವುದರಿಂದ ನಾಲಿಗೆಯ ಕೆಳಭಾಗದ ಜೈವಿಕಪೊರೆಯಲ್ಲಿರುವ ಬ್ಯಾಕ್ಟೀರಿಯಾಗಳು ಕಡಿಮೆಯಾಗುತ್ತವೆ- ಬ್ಯಾಕ್ಟೀರಿಯಾಗಳು ಹಲ್ಲು ಮತ್ತು ಒಸಡಿನ ನಡುವಿರುವ ಚೀಲದಲ್ಲಿ ಇರುತ್ತವೆ- ಈ ಮೂಲಕ ರಕ್ತನಾಳದೊಳಗೆ ಬ್ಯಾಕ್ಟೀರಿಯಾ ವರ್ಗಾವಣೆಯಾಗುವುದು ತಡೆಯುತ್ತದೆ.