ತಮಿಳುನಾಡು ಯುವಜನ- ಕ್ರೀಡಾ ವ್ಯವಹಾರಗಳ ಸಚಿವ ಹಾಗೂ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯ್ನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತಾಗಿ ದ್ವೇಷಪೂರಿತ ನೀಡಿದ್ದ ಹೇಳಿಕೆ ಕನ್ನಡದ ‘ಬಿಗ್ ಬಾಸ್’ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ. ಬೇರೆಯವರ ಭಾವನೆಗಳನ್ನು ನೋಯಿಸಿದರೆ ನಮ್ಮನ್ನು ಮನುಷ್ಯರು ಅಂತಾರಾ ಎಂದು ಚಾಮರಾಜನಗರ ಜಿಲ್ಲೆ ಹನೂರಿನಲ್ಲಿ ನಟ ಪ್ರಥಮ್ ಹೇಳಿಕೆ ನೀಡಿದ್ದಾರೆ.
ಈ ನಡುವೆ ಉದಯ್ನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ವಿವಾದಿತ ಹೇಳಿಕೆ ನೀಡಿದ್ದಕ್ಕೆ ಪ್ರಥಮ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಅವರದ್ದೇ ಆದ ಧರ್ಮ ಇದೆ ನಂಬಿಕೆ ಇದೆ, ನಿನಗಿಷ್ಟ ಇಲ್ಲ ಅಂದ್ರೆ ಬೇಡ. ಬೇರೆಯವರ ಭಾವನೆಗಳನ್ನ ನೋಯಿಸಿದರೆ ಮನುಷ್ಯರು ಅಂತಾರಾ? ಸನಾತನ ಧರ್ಮ ಬಹಳ ಕಾಲದಿಂದ ಇದೆ. ಪ್ರತಿಯೊಂದು ಧರ್ಮವನ್ನು ನಾವು ಗೌರವಿಸಬೇಕು ಎಂದು ಪ್ರಥಮ್ ಮಾತನಾಡಿದ್ದಾರೆ.
ನಿನಗಿಷ್ಟ ಇಲ್ಲ ಅಂದ್ರೆ ಬೇಡ. ಆದರೆ ಸಾರ್ವಜನಿಕವಾಗಿ ಹೆಂಗೆಂಗೋ ಮಾತಾಡೋದು ಸರಿಯಲ್ಲ ಎಂದು ಉದಯ್ನಿಧಿ ವಿರುದ್ಧ ಪ್ರಥಮ್ ವಾಗ್ದಾಳಿ ನಡೆಸಿದ್ದಾರೆ. ಒಂದು ಬಾರಿ ಹೇಳಿದ ಮೇಲೆ ತಿದ್ಕೊಬಹುದು ಅಂದ್ಕೊಂಡಿದ್ದೆ. ನೀಡಿದ ಹೇಳಿಕೆ ತಪ್ಪಾಗಿದ್ರೆ ತಿದ್ದುಕೊಳ್ಳಲು ಬಹಳಷ್ಟು ವೇದಿಕೆಗಳಿವೆ. ಆದರೆ ನಾನು ಮಾತನಾಡಿದ್ದೆ ಸರಿ ಅಂತಾ ಹೇಳೋದು ಅದೆಷ್ಟರ ಮಟ್ಟಿಗೆ ಸರಿ. ಈ ಉಡಾಫೆಯ ಮಾತು ಎಷ್ಟೋ ಜನರ ಭಾವನೆಗಳಿಗೆ ನೋವಾಗುತ್ತೆ.