ಕೆನಡಾ: ಕೆನಡಾದ (Canada) ಜಸ್ಟಿನ್ ಟ್ರುಡೊ(Justin Trudeau) ಅವರ ಸರ್ಕಾರವು ಕಳೆದ ತಿಂಗಳು ಭಾರತದೊಂದಿಗೆ ವ್ಯಾಪಾರ ಮಾತುಕತೆಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಿದೆ. ಕೆನಡಾದ ನಾಯಕ 20 ನಾಯಕರ ಶೃಂಗಸಭೆಗಾಗಿ (G 20 Summit) ದೆಹಲಿಗೆ ಪ್ರಯಾಣಿಸಲು ತಯಾರಿ ನಡೆಸುತ್ತಿದ್ದಾರೆ. ಟ್ರುಡೊ ಸರ್ಕಾರ ವ್ಯಾಪಾರ ಮಾತುಕತೆಯನ್ನು ಸದ್ಯ ನಿಲ್ಲಿಸಿದೆ ಎಂದು ಕೆನಡಾದಲ್ಲಿರುವ ಭಾರತದ ಹೈ ಕಮಿಷನರ್ ದೃಢಪಡಿಸಿದ್ದು, ಇದನ್ನು ಕೆನಡಿಯನ್ ಪ್ರೆಸ್ ಶುಕ್ರವಾರ ವರದಿ ಮಾಡಿದೆ.
ಭಾರತದೊಂದಿಗಿನ ಆರಂಭಿಕ ಪ್ರಗತಿ ವ್ಯಾಪಾರ ಒಪ್ಪಂದದ ಕುರಿತು ನಡೆಯುತ್ತಿರುವ ವೇಗದ ಗತಿಯ ಮಾತುಕತೆಗಳಿಗೆ ಕೆನಡಾದ ಕಡೆಯವರು ಸದ್ಯ ವಿರಾಮ ಸೂಚಿಸಿದ್ದಾರೆ ಎಂದು ಸಂಜಯ್ ಕುಮಾರ್ ವರ್ಮಾ ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ನಿಖರವಾದ ಕಾರಣ ಬಗ್ಗೆ ನನಗೆ ತಿಳಿದಿಲ್ಲವಾದರೂ, ಈ ರೀತಿ ತಾತ್ಕಾಲಿಕ ಸ್ಥಗಿತ ಮಧ್ಯಸ್ಥಗಾರರೊಂದಿಗೆ ಹೆಚ್ಚಿನ ಸಮಾಲೋಚನೆಗಳನ್ನು ಅನುಮತಿಸುತ್ತದೆ ಎಂದು ಹೇಳಿದೆ.
ವ್ಯಾಪಾರ ಮಾತುಕತೆಗಳು ದೀರ್ಘವಾಗಿವೆ. ಸಂಕೀರ್ಣ ಪ್ರಕ್ರಿಯೆಗಳು ಇದರಲ್ಲಿರುತ್ತವೆ. ಕೆನಡಾ ಸದ್ಯ ಇದನ್ನು ನಿಲ್ಲಿಸಿದೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಟ್ರುಡೊ ಅವರ ಮುಂಬರುವ ಭಾರತ ಪ್ರವಾಸದ ಕುರಿತು ಸುದ್ದಿಗೋಷ್ಠಿಯ ವೇಳೆ ತಿಳಿಸಿದ್ದಾರೆ. ಇವರು ಈ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
ಮೇ ತಿಂಗಳಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಒಟ್ಟಾವಾಗೆ ಭೇಟಿ ನೀಡಿದ್ದು, ಅಲ್ಲಿ ಎರಡೂ ಕಡೆಯವರು ಈ ಒಪ್ಪಂದ ಬಗ್ಗೆ ಆಶಾವಾದ ವ್ಯಕ್ತ ಪಡಿಸಿದ್ದರು. ಆರಂಭಿಕ ಪ್ರಗತಿ ಒಪ್ಪಂದಕ್ಕೆ ಸಹಿ ಹಾಕಲು ಅವರು ಹತ್ತಿರವಾಗುತ್ತಿದ್ದಾರೆ ಎಂದು ಕೆನಡಾದ ವ್ಯಾಪಾರ ಸಚಿವ ಮ್ಯಾರಿ ಎನ್ಜಿ ಹೇಳಿದ್ದಾರೆ. ಆರಂಭಿಕ ಒಪ್ಪಂದವು ಆರ್ಥಿಕ ವ್ಯಾಪಿ ಒಪ್ಪಂದಕ್ಕಿಂತ ಹೆಚ್ಚಾಗಿ ಕೆಲವು ಕೈಗಾರಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ.