ಭಾರತೀಯ ಅಡುಗೆಗಳಲ್ಲಿ ಚಟ್ನಿಗೆ ವಿಶೇಷ ಸ್ಥಾನವಿದೆ. ಅಡುಗೆ ಪರಿಣಿತರ ಪ್ರತಿಭೆಯಿಂದಾಗಿ ಕೆಲವೇ ಪದಾರ್ಥಗಳನ್ನು ಬಳಸಿ ಮಾಡುವ ಈ ಚಟ್ನಿ ಬಾಯಲ್ಲಿ ನೀರೂರಿಸುವಂತಿರುತ್ತದೆ. ಶೇಂಗಾ, ಹಸಿಮೆಣಸು, ಟೊಮೆಟೊ ಚಟ್ನಿಯೆಂದು ಹಲವು ಬಗೆಯ ಚಟ್ನಿಯನ್ನು ತಯಾರಿಸಲಾಗುತ್ತದೆ. ಆದರೆ ನಾವು ಇಂದು ಹೇಳುತ್ತೀರುವ ಚಟ್ನಿ ಅತ್ಯಂತ ಸರಳ ಮತ್ತು ರುಚಿಯಾಗಿರುತ್ತದೆ. ಕಡಿಮೆ ಸಾಮಗ್ರಿಗಳನ್ನು ಬಳಸಿಕೊಂಡು ರುಚಿಯಾದ ಅಡುಗೆ ಮಾಡುವ ವಿಧಾನ ಈ ಕೆಳಗಿನಂತಿದೆ.
ಬೇಕಾಗುವ ಸಾಮಗ್ರಿಗಳು:
* ಈರುಳ್ಳಿ -2
* ತೆಂಗಿನತುರಿ- 1ಕಪ್
* ಹಸಿಮೆಣಸು 2 – 3
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- 4 ಟೀ ಸ್ಪೂನ್
* ಸಾಸಿವೆ- 1 ಟೀ ಸ್ಪೂನ್
* ಬೆಳ್ಳುಳ್ಳಿ-1
* ಜೀರಿಗೆ- ಅರ್ಧ ಟೀ ಸ್ಪೂನ್
* ಕರೀಬೇವು- ಸ್ವಲ್ಪ
* ಹುಣಸೆಹಣ್ಣು- ಸ್ವಲ್ಪ
* ಕೊತ್ತಂಬರಿ ಸೊಪ್ಪು
* ಕೆಂಪು ಮೆಣಸು-2
ಮಾಡುವ ವಿಧಾನ:
* ಒಂದು ಬಾಣಲೆ ಒಲೆಯ ಮೇಲೆ ಇಟ್ಟು ಅಡುಗೆ ಎಣ್ಣೆಯನ್ನು ಹಾಕಿ ಕಾಯುತ್ತಿದ್ದಂತೆ, ಜೀರಿಗೆ, ಕರೀಬೇವು, ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ. ಹಸಿ ಮೆಣಸು, ಕೆಂಪು ಮೆಣಸು, ತೆಂಗಿನಕಾಯಿ ಹಾಕಿ ಚೆನ್ನಾಗಿ ಫ್ರೈ ಮಾಡಬೇಕು.
* ಈಗ ಫ್ರೈ ಮಾಡಿರುವ ಮಸಾಲೆಯನ್ನು ಮಿಕ್ಸಿಗೆ ಹಾಕಿ ಜೊತೆಗೆ ಕೊತ್ತಂಬರಿಯನ್ನು ಹಾಕಿ ರುಬ್ಬಿಕೊಳ್ಳಬೇಕು.
* ಇದೀಗ ಬಾಣಲೆಗೆ ಅಡುಗೆ ಎಣ್ಣೆ, ಸಾಸಿವೆ, ಕೊತ್ತಂಬರಿ ಹಾಕಿ ಒಗ್ಗರಣೆಗೆ ತಯಾರಿಸಿಕೊಂಡು ರುಬ್ಬಿಕೊಂಡಿರುವ ಚಟ್ನಿ,ಉಪ್ಪು, ಹುಣಸೆಹಣ್ಣು ಹಾಕಿ ಚೆನ್ನಾಗಿ ಮಿಶ್ರಣವನ್ನು ಮಾಡಿ ಸ್ವಲ್ಪ ಬಿಸಿ ಮಾಡಿದರೆ ರುಚಿಯಾದ ಈರುಳ್ಳಿ ಚಟ್ನಿ ಸವಿಯಲು ಸಿದ್ಧವಾಗುತ್ತದೆ.