ರಕ್ತದೊತ್ತಡದ ಸಮಸ್ಯೆಇರುವವರು ಕೆಲವು ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳನ್ನು ಮಾಡುವ ಮೂಲಕ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ನೀವೂ ಕೂಡಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಮ್ಮ ಆಹಾರದಿಂದ ಹೆಚ್ಚಿನ ಪ್ರಮಾಣದ ಟ್ರಾನ್ಸ್-ಕೊಬ್ಬುಗಳು, ಉಪ್ಪು ಮತ್ತು ಸಕ್ಕರೆಯನ್ನು ಹೊಂದಿರುವ ಆಹಾರವನ್ನು ಕಡಿಮೆ ಮಾಡುವುದು ಒಳ್ಳೆಯದು. ಈ ಕೆಲವು ಹಣ್ಣುಗಳು ನಿಮ್ಮ ರಕ್ತದೊತ್ತಡವನ್ನು ಕಂಟ್ರೋಲ್ನಲ್ಲಿಡಲು ಸಹಕಾರಿಯಾಗಬಲ್ಲದು.
ಕಿತ್ತಳೆ ಹಣ್ಣು
ಪೊಟ್ಯಾಷಿಯಂ ಹಾಗೂ ವಿಟಮಿನ್ ಸಿ ಯಿಂದ ಸಮೃದ್ಧವಾಗಿರುವ ಕಿತ್ತಳೆಯೊಳಗೆ ಹಲವು ಆರೋಗ್ಯಕರ ಗುಣಗಳಿದ್ದು ಬಿಪಿಯನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿದೆ. ನೀವು ಈ ಹಣ್ಣನ್ನು ಸೇವಿಸಬಹುದು ಅಥವಾ ಜ್ಯೂಸ್ ಮಾಡಿಯೂ ಕುಡಿಯಬಹುದು.
ನಿಂಬೆ ಮತ್ತು ದ್ರಾಕ್ಷಿಹಣ್ಣು ಕೂಡಾ ಕಿತ್ತಳೆ ಹಣ್ಣಿನಲ್ಲಿರುವಂತಹ ಆಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಸಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಬಿಪಿ ಸಮಸ್ಯೆಯನ್ನು ನಿವಾರಿಸುತ್ತದೆ.
ಬಾಳೆಹಣ್ಣು
ಪೊಟ್ಯಾಷಿಯಂನಿಂದ ಸಮೃದ್ಧವಾಗಿರುವ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡಾ ಒಂದು. ಅದರಲ್ಲಿ ಸಾಕಷ್ಟು ಪೋಷಕಾಂಶಗಳು ಇರುತ್ತವೆ. ಇದನ್ನು ನಿಯಮಿತವಾಗಿ ಸೇವಿಸಿದರೆ ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಬಾಳೆಹಣ್ಣನ್ನು ಸೇವಿಸಿದರೆ ಬಿಪಿಯನ್ನೂ ನಿಯಂತ್ರಿಸಬಹುದು.
ಕಿವಿ ಹಣ್ಣು
ಕಿವಿ ಹಣ್ಣು ರುಚಿಕರವಾಗಿದ್ದು, ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮುಂತಾದ ಅನೇಕ ಅಗತ್ಯ ಪೋಷಕಾಂಶಗಳು ಈ ಹಣ್ಣಿನಲ್ಲಿದೆ. ಇದರ ಸೇವನೆಯಿಂದ ಬಿಪಿಯನ್ನೂ ನಿಯಂತ್ರಿಸಬಹುದು.
ನಿಮ್ಮ ಬೇಸಿಗೆಯ ಮಿಶ್ರ ಹಣ್ಣಿನ ಸಲಾಡ್ನಲ್ಲಿ ಕಿವಿ ಹಣ್ಣನ್ನು ಮಿಕ್ಸ್ ಮಾಡಿ ಸೇವಿಸಿ ಅಥವಾ ಕಿವಿ ಜ್ಯೂಸ್ ಅನ್ನು ತಯಾರಿಸಿ ಕುಡಿಯಬಹುದು.
ಅವಾಕಾಡೋ
ಅವಾಕಾಡೋ ಹಣ್ಣಿನಲ್ಲಿ ಬಾಳೆಹಣ್ಣಿಗಿಂತಲೂ ಹೆಚ್ಚಿನ ಪೊಟ್ಯಾಷಿಯಂ ಇದೆ. ಬೆಣ್ಣೆಯಂತಿರುವ ಈ ಹಣ್ಣು ಸಾಕಷ್ಟು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ನಿಮ್ಮ ರಕ್ತದೊತ್ತಡ ಸಮಸ್ಯೆಯನ್ನು ಸರಿದೂಗಿಸಲು ಇದು ಸಹಕಾರಿಯಾಗಿದೆ.
ಪೇರಳೆ ಹಣ್ಣು
ಈ ಉಷ್ಣವಲಯದ ಹಣ್ಣು ಸಾಕಷ್ಟು ಆರೋಗ್ಯ ಪ್ರಯೋಜನಗಳಿಂದ ತುಂಬಿದೆ ಮತ್ತು ಬಹುಶಃ ಅವುಗಳಿಗೆ ಕಡಿಮೆ ಮೌಲ್ಯಯುತವಾಗಿದೆ. ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಎರಡರ ವಿಷ್ಯಕ್ಕೂ ಬಂದಾಗ ಪೇರಳೆ ಹಣ್ಣು ಕಿತ್ತಳೆಗಿಂತ ಹೆಚ್ಚು ಶ್ರೀಮಂತವಾಗಿದೆ. ಇದು ನಿಮ್ಮ ಮಧುಮೇಹ ಹಾಗೂ ರಕ್ತದೊತ್ತಡವನ್ನೂ ಕಂಟ್ರೋಲ್ನಲ್ಲಿಡಲು ಸಹಕಾರಿಯಾಗಿದೆ.
ಟೊಮೆಟೋ
ಟೊಮೆಟೋವನ್ನು ಹೆಚ್ಚಿನವರು ಅಡುಗೆಗೆ ತರಕಾರಿಯ ರೂಪದಲ್ಲಿ ಬಳಸುತ್ತಾರೆ. ಟೊಮೆಟೋ ಪೊಟ್ಯಾಷಿಯಂನಿಂದ ಕೂಡಿದೆ. ರಕ್ತದೊತ್ತಡದ ಸಮಸ್ಯೆ ಇರುವವರು ಇದನ್ನು ಹಾಗೆಯೇ ಸೇವಿಸಬಹುದು, ಇಲ್ಲವಾದರೆ ಜ್ಯೂಸ್ ಮಾಡಿಯೂ ಕುಡಿಯಬಹುದು. ಟೊಮೆಟೋ ರಸಂ, ಸೂಪ್ಗಳಲ್ಲೂ ಬಳಸಬಹುದು. ಆದರೆ ನೀವು ಟೊಮೆಟೋದಿಂದ ಯಾವುದೇ ಆಹಾರ ತಯಾರಿಸುವಾಗಲು ಉಪ್ಪನ್ನು ಮಾತ್ರ ಹೆಚ್ಚಾಗಿ ಬಳಸಬೇಡಿ