ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟನೆಯ ಕದ್ದಚಿತ್ರ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗ್ತಿದೆ. ಶುಕ್ರವಾರದಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದ ಚಿತ್ರ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ. ಕಾದಂಬರಿಗಾರನಾಗಿ ರಾಘು ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದು, ಅವ್ರ ಪಾತ್ರಕ್ಕೆ ಪ್ರೇಕ್ಷಕ ಚಪ್ಪಾಳೆ ತಟ್ಟಿದ್ದಾನೆ.
ಕೃತಿಚೌರ್ಯದ ಕಥಾಹಂದರ ಹೊಂದಿರುವ ಕದ್ದಚಿತ್ರಕ್ಕೆ ಸುಹಾಸ್ ಕೃಷ್ಣ ಸಾರಥಿ. ಬರಹಗಾರನೊಬ್ಬನ ಬದುಕಿನ ಕೇಸ್ ಸ್ಟಡಿ ಜೊತೆಗೆ ಕ್ರೈಮ್ ಎಳೆಯನ್ನು ಇಟ್ಕೊಂಡು ಎಣೆದಿರುವ ಈ ಕಥೆಗೆ ಸಂದೀಪ್ ಹೆಚ್ ಕೆ ಬಂಡವಾಳ ಹೂಡಿದ್ದಾರೆ. ವಿಜಯ್ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್ ಸೇರಿದಂತೆ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಪರಭಾಷಾ ಸಿನಿಮಾದ ಅಬ್ಬರದ ನಡುವೆಯೂ ಹೊಸ ಪ್ರಯೋಗದ ಕದ್ದಚಿತ್ರ ಪ್ರೇಕ್ಷಕರ ಹೃದಯ ಗೆಲ್ಲುತ್ತಿದೆ. ಕನ್ನಡ ತಾರೆಯರು ಮೆಚ್ಚಿರುವ ಚಿನ್ನಾರಿ ಮುತ್ತನ ಹೊಸ ಕಥೆಗೆ ಸಿನಿಮಾಪ್ರೇಮಿಗಳು ಫುಲ್ ಮಾರ್ಕ್ಸ್ ಕೊಡ್ತಿದ್ದಾರೆ.