ವಿಶ್ವ ಕ್ರಿಕೆಟ್ನ ಬ್ಯಾಟಿಂಗ್ ದಿಗ್ಗಜರಾಗಿರುವ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.ಆದರೆ ಈ ಇಬ್ಬರು ಆಟಗಾರರು ತಮ್ಮ ಬೌಲಿಂಗ್ನಲ್ಲಿ ಸಾಮಾನ್ಯವಾಗಿ ಮೂವರು ಆಟಗಾರರ ವಿಕೆಟ್ ಪಡೆದಿರುವುದು ವಿಶೇಷವಾಗಿದೆ.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕ ಸಿಡಿಸಿದ ಏಕೈಕ ಆಟಗಾರ ಎಂಬ ವಿಶ್ವದಾಖಲೆ ಬರೆದಿರುವುದಲ್ಲದೆ, 443 ಏಕದಿನ ಹಾಗೂ 200 ಟೆಸ್ಟ್ ಪಂದ್ಯಗಳಿಂದ ಕ್ರಮವಾಗಿ 18,426 ಹಾಗೂ 15,921 ರನ್ ಗಳಿಸಿದ್ದಾರೆ. ಇದರಲ್ಲಿ 76 ಅಂತಾರಾಷ್ಟ್ರೀಯ ಶತಕ ಸಿಡಿಸಿರುವ ಕ್ಲಾಸ್ ಆಟಗಾರ ವಿರಾಟ್ ಕೊಹ್ಲಿ, 25 ಸಾವಿರಕ್ಕೂ ಹೆಚ್ಚು ರನ್ ಬಾರಿಸಿದ್ದಾರೆ ಹಾಗೂ ಎಲ್ಲಾ ಮಾದರಿ ಕ್ರಿಕೆಟ್ನಲ್ಲಿ ಶತಕ ಸಿಡಿಸಿದ್ದಾರೆ.
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ಅಲ್ಲದೆ ಬಲಗೈ ಲೆಗ್ ಬ್ರೇಕ್ ಬೌಲಿಂಗ್ನಿಂದಲೂ ಗಮನ ಸೆಳೆದಿದ್ದು, 201 ವಿಕೆಟ್ ಪಡೆದಿದ್ದಾರೆ. ಒಡಿಐನಲ್ಲಿ 154 ವಿಕೆಟ್ ಪಡೆದಿರುವ ಸಚಿನ್, 2 ಬಾರಿ 5 ವಿಕೆಟ್ ಸಾಧನೆ ಮಾಡಿದ್ದಾರೆ. ಬಲಗೈ ಮಧ್ಯಮ ಬೌಲರ್ ಆಗಿರುವ ವಿರಾಟ್ ಕೊಹ್ಲಿ, 8 ವಿಕೆಟ್ ಪಡೆದಿದ್ದಾರೆ. ಸಚಿನ್ ಹಾಗೂ ವಿರಾಟ್ ಕೊಹ್ಲಿ ಬೌಲಿಂಗ್ನಲ್ಲಿ ಔಟಾದ 3 ವಿಶ್ವ ಶ್ರೇಷ್ಠ ಬ್ಯಾಟರ್ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.
1.ಮೊಹಮ್ಮದ್ ಹಫೀಜ್ ಗೆ ಪೆವಿಲಿಯನ್ ಹಾದಿ ತೋರಿಸಿದ್ದರು
ಪಾಕಿಸ್ತಾನ ಮಾಜಿ ನಾಯಕ ಮೊಹಮ್ಮದ್ ಹಫೀಜ್ 2005ರಲ್ಲಿ ಕೇರಳದ ಕೊಚ್ಚಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ 42 ರನ್ ಗಳಿಸಿ ಅಪಾಯಕಾರಿ ಆಗೊದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಸ್ಪಿನ್ ಮೋಡಿಗೆ ಶರಣಾಗಿ ಆಶಿಶ್ ನೆಹ್ರಾಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿಸಿದ್ದರು.
2.ಬ್ರೆಡಂನ್ ಮೆಕಲಮ್ ಗೆ ನಿದ್ದೆಗೆಡಿಸಿದ್ದರು
2009ರ ನ್ಯೂಜಿಲೆಂಡ್ ಪ್ರವಾಸದ ವೆಲ್ಲಿಂಗ್ಟನ್ ಟೆಸ್ಟ್ ದ್ವಿತೀಯ ಇನಿಂಗ್ಸ್ನಲ್ಲಿ ನ್ಯೂಜಿಲೆಂಡ್ ಮಾಜಿ ನಾಯಕ ಬ್ರೆಂಡನ್ ಮೆಕಲಮ್ (6 ರನ್), ಸಚಿನ್ ತೆಂಡೂಲ್ಕರ್ ಅವರ ಲೆಗ್ ಬ್ರೇಕ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಮೊದಲ ಸ್ಲೀಪ್ ನಲ್ಲಿದ್ದ ರಾಹುಲ್ ದ್ರಾವಿಡ್ಗೆ ಕ್ಯಾಚ್ ಕೊಟ್ಟು ಔಟ್ ಆಗಿದ್ದರು
3.ಕೆವಿನ್ ಪೀಟರ್ಸನ್ ಗೆ ಚಳ್ಳೆಹಣ್ಣು ತಿನ್ನಿಸಿದ್ದರು
ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್ ನಿಂದ ಖ್ಯಾತಿ ಹೊಂದಿದ್ದರು. ಭಾರತ 2007ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದಾಗ ಓವಲ್ನಲ್ಲಿ ನಡೆದಿದ್ದ ಮೂರನೇ ಟೆಸ್ಟ್ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಬೌಲಿಂಗ್ನಲ್ಲಿ ಕೆವಿನ್ ಪೀಟರ್ಸನ್ (41 ರನ್) ವಿಕೆಟ್ ಒಪ್ಪಿಸಿದ್ದರು.