ಎಳನೀರಿನಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ. ಪ್ರತೀನಿತ್ಯ ಒಂದೊಂದು ಎಳನೀರು ಕುಡಿಯುವ ಅಭ್ಯಾಸವಿಟ್ಟುಕೊಂಡರೆ, ದೇಹಕ್ಕೆ ಎದುರಾಗುವ ಸಾಕಷ್ಟು ರೋಗಗಳಿಂದ ದೂರ ಇರಬಹುದು. ನವಿರಾದ ಸಿಹಿ, ನೀರಿನಷ್ಟೇ ಗಾಢವಾದ ಎಳನೀರು ದೇಹಕ್ಕೆ ಅಗತ್ಯವಾದ ಬಹಳಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಎಳನೀರಿನಿಂದ ಸಿಗುವ ಪೋಷಕಾಂಶಗಳಿಂದ ದೇಹ ಶೀಘ್ರ ತನ್ನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತದೆ.
ಮುಖ್ಯವಾಗಿ ನಮ್ಮ ನಿರ್ಜಲೀಕರಣವನ್ನು ಹೋಗಲಾಡಿಸಿ ಒಳಗಿನಿಂದ ನಮ್ಮ ದೇಹವನ್ನು ಕ್ಲೀನ್ ಮಾಡುತ್ತದೆ. ಇದರಲ್ಲಿ ವಿಟಮಿನ್ ಮತ್ತು ಖನಿಜಾಂಶಗಳು ಅಪಾರ ಪ್ರಮಾಣದಲ್ಲಿವೆ.
ಹಾಗಾಗಿಯೇ ಕಳೆದ ಹತ್ತು ವರ್ಷಗಳಲ್ಲಿ ಎಳನೀರಿನ ಬಳಕೆ ಸೌಂದರ್ಯ ಪ್ರಿಯರನ್ನು ಕೂಡ ತನ್ನತ್ತ ಆಕರ್ಷಿಸಿದೆ. ಜನರು ತಮ್ಮ ಆಹಾರ ಪದ್ಧತಿಯಲ್ಲಿ ಎಳನೀರನ್ನು ಒಂದಲ್ಲ ಒಂದು ರೂಪದಲ್ಲಿ ಸೇರಿಸಿಕೊಂಡು ಅದರಿಂದ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.
ನಿಶಕ್ತಿಗೆ ಎಳನೀರು ಅತ್ಯುತ್ತಮ ಆಯ್ಕೆ, ಪ್ರತಿದಿನ ಎಳನೀರನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚುವುದಲ್ಲದೆ, ನವ ಚೈತನ್ಯ ಇರುತ್ತದೆ.
- ಅಜೀರ್ಣ ಮತ್ತು ಹೊಟ್ಟೆನೋವು ಸಂಬಂದಿತ ಸಮಸ್ಯೆಗಳಿಗೆ ಎಳನೀರು ಒಳ್ಳೆಯ ಆರೋಗ್ಯ ಪರಿಣಾಮ ನೀಡುತ್ತದೆ. ಪ್ರತಿದಿನ ಎಳನೀರು ಸೇವಿಸಿದರೆ ಅಜೀರ್ಣ ಸಮಸ್ಯೆ ಮತ್ತು ಹೊಟ್ಟೆ ನೋವು ನಿವಾರಣೆ ಆಗುತ್ತದೆ.
- ಎಳನೀರು ಕೇವಲ ಆರೋಗ್ಯ ಪ್ರಯೋಜನೆಗಳನ್ನು ಮಾತ್ರ ಹೊಂದಿಲ್ಲ, ಇದು ಚರ್ಮಕ್ಕೂ ಅಷ್ಟೇ ಉತ್ತಮ ಪರಿಹಾರಗಳನ್ನು ನೀಡುತ್ತದೆ, ಸುಕ್ಕುಗಟ್ಟಿದ ಚರ್ಮವನ್ನು ಎಳನೀರಿನಿಂದ ತೊಳೆದರೆ ಚರ್ಮದ ಸುಕ್ಕು ನಿವಾರಣೆಯಾಗುತ್ತದೆ.
- ಎಳನೀರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಮತ್ತು ಮಧುಮೇಹ ರೋಗಲಕ್ಷಣಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.
- ಎಳನೀರಿನಲ್ಲಿರುವ ವಿವಿಧ ವಿಟಮಿನ್ ಮತ್ತು ವಿಶೇಷವಾಗಿ ವಿಟಮಿನ್ ಕೆ ಮತ್ತು ಕಬ್ಬಿಣದ ಅಂಶ ಕೂದಲಿಗೆ ಸಹಕಾರಿಯಾಗಿದೆ. ಕೂದಲನ್ನು ಕೊಂಚ ಎಳನೀರಿನಿಂದ ಮಸಾಜ್ ಮಾಡುವುದರಿಂದ ತಲೆಯ ಚರ್ಮದಲ್ಲಿ ರಕ್ತಸಂಚಾರ ಹೆಚ್ಚುತ್ತದೆ. ಇದರ ಪರಿಣಾಮ ಕೂದಲ ಬುಡ ಹೆಚ್ಚು ಶಕ್ತಿಯುತವಾಗುತ್ತವೆ. ಕೂದಲು ಉದುರುವುದು ಕಡಿಮೆಯಾಗಿ ಕೂದಲ ಹೊಳಪು ಹೆಚ್ಚುತ್ತದೆ. ಕೂದಲು ಮೃದುವಾಗಿಸುವಲ್ಲಿ ಕೂಡಾ ಸಹಾಯ ಮಾಡುತ್ತದೆ.
- ಮುಖದ ಮೇಲೆ ಹೊಳಪನ್ನು ಕಾಪಾಡಿಕೊಳ್ಳಲು ಎಳನೀರು ಸಹಾಯ ಮಾಡುತ್ತದೆ. ನಿರ್ಜಲೀಕರಣವು ಚರ್ಮವನ್ನು ಹಾನಿಯುಂಟು ಮಾಡುತ್ತದೆ. ಜೊತೆಗೆ ನಿಮ್ಮ ಮುಖದಲ್ಲಿ ಮೊಡವೆ ಉಂಟಾಗಲು ಕಾರಣವಾಗುತ್ತದೆ. ಎಳನೀರು ದೇಹಕ್ಕೆ ತೇವಾಂಶವನ್ನು ನೀಡುವುದರಿಂದ ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ.
- ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು, ಮೂತ್ರನಾಳದ ಸೋಂಕಿನಿಂದ ನಿಮಗೆ ರಕ್ಷಣೆಯನ್ನು ನೀಡುತ್ತದೆ.