ಕೊರೊನಾ ಬಂದ ಮೇಲೆ ಮಕ್ಕಳಿಗೂ ಆನ್ ಲೈನ್ ಕ್ಲಾಸ್ ಗಳು ಆರಂಭವಾಗಿ ಅವರು ಕೂಡ ಮೊಬೈಲ್ ನ್ನು ಹೆಚ್ಚೆಚ್ಚು ನೋಡುವಂತೆ ಮಾಡಿದೆ. ಮೊಬೈಲ್ ನಲ್ಲೇ ಇರುವಂತಹ ಹಾಗೂ ಯಾವಾಗಲೂ ಟಿವಿ ನೋಡುತ್ತಿರುವಂತಹ ಮಕ್ಕಳ ಕಣ್ಣಿನ ಮೇಲೆ ಪರಿಣಾಮ ಬೀರುವುದು. ಆದರೆ ಮಕ್ಕಳನ್ನು ಮೊಬೈಲ್ ನಿಂದ ದೂವಿರುಡುವುದು ತುಂಬಾ ಕಷ್ಟದ ಕೆಲಸ. ಅದರಲ್ಲಿ ಬಗೆಬಗೆಯ ಗೇಮ್ಸ್ ಗಳು, ಅದೇ ರೀತಿಯಾಗಿ ಕೆಲವೊಂದು ವೀಡಿಯೋಗಳು ಮಕ್ಕಳನ್ನು ಸೆಳೆಯುತ್ತಾ ಇರುತ್ತದೆ. ಹೀಗಾಗಿ ಅವರು ಯಾವಾಗಲೂ ಮೊಬೈಲ್ ಗೆ ಜೋತು ಬಿದ್ದಿರುವರು.
ಮೊಬೈಲ್ ಫೋನ್ ಹಾಗೂ ಕಂಪ್ಯೂಟರ್ ನಿಂದ ಮಕ್ಕಳನ್ನು ದೂರವಿಡುವುದು ಹೇಗೆ ಎಂದು ನಿಮಗೆ ತಿಳಿಸಿಕೊಡಲಿದ್ದೇವೆ.
ಹೊರಗಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ
ಆಡುವುದು, ಈಜುವುದು, ಸೈಕ್ಲಿಂಗ್ ಮತ್ತು ಓಟ ಇತ್ಯಾದಿ ಹೊರಾಂಡದ ಚಟುವಟಿಕೆಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ ಮತ್ತು ಮಕ್ಕಳಿಗೂ ಇದನ್ನು ಕಲಿಸಿ. ಮಕ್ಕಳು ಹೊರಾಂಡದ ಆಟವಾಡಿದರೆ ಅದರಿಂದ ದೈಹಿಕವಾಗಿಯೂ ಅವರಿಗೆ ಹೆಚ್ಚು ವ್ಯಾಯಾಮ ಸಿಗುವುದು.
ಕಥೆಗಳನ್ನು ಹೇಳಿ
ಪ್ರತಿನಿತ್ಯವೂ ನಮಗೆ ಅಜ್ಜ ಮತ್ತು ಅಜ್ಜಿ ಒಂದು ನೀತಿ ಕಥೆಗಳನ್ನು ಹೇಳುತ್ತಿದ್ದರು. ಅದೇ ನೀತಿ ಕಥೆಗಳನ್ನು ನೀವು ಕೂಡ ಮಕ್ಕಳಿಗೆ ಹೇಳಿ. ಅವರಿಗೆ ಮೊಬೈಲ್ ಗಿಂತಲೂ ಕಥೆಗಳಲ್ಲಿ ಆಸಕ್ತಿ ಮೂಡುವಂತೆ ಮಾಡಿ.
ಅವರಿಗೆ ಯೂಟೂಬ್ ನಲ್ಲಿ ಹಾಡು ಮತ್ತು ಡ್ಯಾನ್ಸ್ ತೋರಿಸುವ ಬದಲು ಮಲಗುವ ಸಮಯದಲ್ಲಿ ಕಥೆ ಹೇಳಿದರೆ ಇದು ಅವರಿಗೆ ಶಾಲೆಗಳಲ್ಲೂ ನೆರವಿಗೆ ಬರುವುದು.
ದಿನಚರಿ ಬದಲಾಯಿಸಿ
ಮೊಬೈಲ್ ಇಲ್ಲದೆ ಇರುವಂತಹ ಚಟುವಟಿಕೆಗಳಲ್ಲಿ ನೀವು ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಿ. ಮಕ್ಕಳನ್ನು ಅವರ ದಿನಚರಿಯಲ್ಲಿ ವ್ಯಸ್ತವಾಗಿ ಇರುವಂತೆ ನೋಡಿಕೊಳ್ಳಿ. ಮಕ್ಕಳನ್ನು ಕಲಿಕೆ, ಆಟ ಇತ್ಯಾದಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿ
ಉದಾಹರಣೆ ಆಗಬೇಕು
ಮಕ್ಕಳು ಯಾವಾಗಲೂ ದೊಡ್ಡವರನ್ನು ನೋಡಿ ಕಲಿಯುವರು ಮತ್ತು ಪೋಷಕರು ಯಾವತ್ತಿಗೂ ಅವರಿಗೆ ಪ್ರೇರಣೆ ಆಗಿರುವರು. ನಿಮ್ಮ ಪ್ರತಿಯೊಂದು ಚಟುವಟಿಕೆ ಹಾಗೂ ದಿನಚರಿಯ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು