ತುಪ್ಪ ಎನ್ನುವುದು ಭಾರತೀಯರ ಅಡುಗೆ ಮನೆಯಲ್ಲೇ ತಪ್ಪದೆ ಇರುವಂತಹ ಸಾಮಗ್ರಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆಯುರ್ವೇದದಲ್ಲಿ ಕೂಡ ಇದನ್ನು ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ತುಪ್ಪದ ಬಗ್ಗೆ ಕೆಲವರಲ್ಲಿ ತಪ್ಪು ಅಭಿಪ್ರಾಯವಿದ್ದು, ತುಪ್ಪ ಸೇವನೆ ಮಾಡಿದರೆ, ಅದರಿಂದ ದೇಹದಲ್ಲಿ ಕೊಬ್ಬು ಬೆಳೆಯುವುದು ಎಂದು ಹೇಳುವರು. ಆದರೆ ತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ, ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗುವುದು ಎಂದು ಹೇಳಲಾಗುತ್ತದೆ.
ಖಾಲಿ ಹೊಟ್ಟೆಯಲ್ಲಿ ತುಪ್ಪ ತಿಂದರೆ ಆಗುವ ಪ್ರಯೋಜನಗಳು:
- ತುಪ್ಪ ಚರ್ಮದ ಆರೋಗ್ಯಕ್ಕೆ ಅತ್ಯುತ್ತಮ.
- ಜೀರ್ಣ (Digestive) ವ್ಯವಸ್ಥೆಯನ್ನು ಉತ್ತಮಗೊಳಿಸುವ, ಹೊಟ್ಟೆಯಲ್ಲಿರುವ ವಿಷಕಾರಿ (Toxic) ಅಂಶಗಳನ್ನು ನಿವಾರಣೆ ಮಾಡುವ ಗುಣ ಹೊಂದಿದೆ. ತನ್ಮೂಲಕ ಹೊಟ್ಟೆಯನ್ನು ಶುದ್ಧ ಮಾಡುತ್ತದೆ.
- ತುಪ್ಪ ಫಿಲ್ಲರ್ (Filler) ನಂತೆ ಕೆಲಸ ಮಾಡುತ್ತದೆ ಹಾಗೂ ದೀರ್ಘ ಸಮಯವರೆಗೆ ಹೊಟ್ಟೆ ತುಂಬಿಕೊಂಡಿರುವಂತೆ ಭಾಸವಾಗುತ್ತದೆ. ಇದರಿಂದ ಹೆಚ್ಚುವರಿ ಆಹಾರ ಸೇವನೆ ಕಡಿಮೆಯಾಗುತ್ತದೆ.
- ಮೂಳೆಯ ಶಕ್ತಿಯನ್ನು ವರ್ಧಿಸುತ್ತದೆ, ದೇಹಕ್ಕೆ ಬಲ ನೀಡುತ್ತದೆ.
- ಕರುಳಿಗೆ (Gut) ಪೂರಕವಾಗಿರುವ ಎಂಝೈಮುಗಳನ್ನು (Enzyme) ಹೊಂದಿರುತ್ತದೆ. ಹೀಗಾಗಿ, ಮಲಬದ್ಧತೆಯಂತಹ ಸಮಸ್ಯೆ ಇರುವುದಿಲ್ಲ.
- ತುಪ್ಪದ ಸೇವನೆಯಿಂದ ಮಿದುಳಿನ (Brain) ಬೆಳವಣಿಗೆಗೆ ಸಹಾಯವಾಗುತ್ತದೆ. ಇದರಿಂದ ಏಕಾಗ್ರತೆಯ (Concentration) ಸಮಸ್ಯೆ ಉಂಟಾಗುವುದಿಲ್ಲ.