ಟೂರ್ನಿಯುದ್ದಕ್ಕೂ ವರುಣನ ಕಾಟವಿದ್ದರೂ ಲೀಗ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಒಂದೇ ಒಂದು ಪಂದ್ಯ ಮಾತ್ರ ಮಳೆಯಿಂದ ರದ್ದಾಗಿತ್ತು. ಇದು ಬಿಟ್ಟರೆ ಸೂಪರ್-4ರ ಹಂತದಲ್ಲಿ ಮಳೆಯಿಂದ ಕೇವಲ 16 ಓವರ್ಗಳನ್ನು ಮಾತ್ರ ಇಳಿಸಲಾಗುತ್ತಿತ್ತು. ಇದರ ಶ್ರೇಯ ಕೊಲಂಬೊದ ಮೈದಾನದ ಸಿಬ್ಬಂದಿಗೆ ಸಲ್ಲಬೇಕು. ಅಂದ ಹಾಗೆ ಸೂಪರ್-4ರ ಎಲ್ಲಾ ಪಂದ್ಯಗಳು ಕೂಡ ಕೊಲಂಬೊದಲ್ಲಿಯೇ ನಡೆದಿದ್ದವು.
ಅಕ್ಯೂವೆದರ್ ವರದಿ ಪ್ರಕಾರ ಭಾನುವಾರ ಶೇ. 90 ರಷ್ಟು ಮಳೆಯನ್ನು ನಿರೀಕ್ಷಿಸಲಾಗಿದೆ. ಇದರ ಜತೆಗೆ ಶೇ. 99 ರಷ್ಟು ಮೋಡ ಮುಸುಕಿದ ವಾತಾವಣ ಇರಲಿದ್ದು, ಗಂಟೆಗೆ 15 ಕಿ.ಮೀ ವೇಗವಾಗಿ ಗಾಳಿ ಬೀಸಬಹುದು. ಪಂದ್ಯ ಮಧ್ಯಾನ 3 ಗಂಟೆಗೆ ಆರಂಭವಾದರೂ ಮಳೆ ಬೀಳುವ ಸಾಧ್ಯತೆ ಇದೆ. ರಾತ್ರಿಯವರೆಗೂ ಈ ಹವಾಮಾನ ಬದಲಾವಣೆಯಾಗುವುದಿಲ್ಲ.
ಅಂದ ಹಾಗೆ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಹವಾಮಾನ ಬಹುದೊಡ್ಡ ಪ್ರಭಾವ ಬೀರಲಿದೆ. ಟಾಸ್ ಗೆದ್ದ ತಂಡದ ನಾಯಕ ಮೊದಲು ಬ್ಯಾಟ್ ಮಾಡುವ ಸಾಧ್ಯತೆ ಇದೆ. ಏಕೆಂದರೆ ಹವಾಮಾನ ಬದಲಾವಣೆಯಾಗಿ ಡಿಎಲ್ಎಸ್ ನಿಯಮದ ಪ್ರಕಾರ ಟಾರ್ಗೆಟ್ ನೀಡಿದರೆ ಚೇಸಿಂಗ್ ತಂಡಕ್ಕೆ ಕಷ್ಟವಾಗಬಹುದು. ಹಾಗಾಗಿ ಟಾಸ್ವರೆಗೂ ತಂಡಗಳು ಕಾದು ನೋಡಿ ನಂತರ ಮೊದಲು ಬ್ಯಾಟ್ ಮಾಡಬೇಕಾ? ಅಥವಾ ಬೌಲ್ ಮಾಡಬೇಕಾ? ಎಂಬ ಬಗ್ಗೆ ನಿರ್ಧಾರ ಮಾಡಲಿವೆ. ಒಂದು ವೇಳೆ ಟಾಸ್ಗೂ ಮುನ್ನ ಮಳೆಯಾದರೆ, ಪಿಚ್ ತನ್ನ ಸ್ವಭಾವವನ್ನು ಬದಲಿಸಿಕೊಳ್ಳಬಹುದು