ಹಬ್ಬ ಎಂದರೆ ಸಿಹಿ ಅಡುಗೆ ಹೆಚ್ಚಾಗಿರುತ್ತದೆ. ಹಾಗೆಯೇ ಸಿಹಿಯಾದ ಅಡುಗೆಯನ್ನು ಇಷ್ಟಪಡುವವರು ಇರುತ್ತಾರೆ. ವಿಘ್ನ ವಿನಾಶಕನಾಗಿರುವ ಗಣಪನ ಪೂಜೆಗೆ ಸಿಹಿ ತಿಂಡಿಗಳನ್ನು ಮಾಡುತ್ತೀರಾ. ಸರಳವಾಗಿ ಹೊಸ ಹೊಸ ರೆಸಿಪಿಗಳನ್ನು ನೀವೆನಾದ್ರೂ ತಯಾರಿಸಿ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚು ಮಾಡಬೇಕು ಎಂದರೆ ಬಾದಾಮಿ ಹಲ್ವಾ ರೆಸಿಪಿಯನ್ನು ಮಾಡಲು ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
* ಬಾದಾಮಿ – 1 ಕಪ್ (ರಾತ್ರಿ ನೆನೆಸಿಟ್ಟಿರಬೇಕು)
* ಸಕ್ಕರೆ – 1 ಕಪ್
* ಹಾಲು – 1 ಕಪ್
* ತುಪ್ಪ – ಅರ್ಧ ಕಪ್
* ಕೇಸರಿ – ಕೆಲವು ಎಸಳು (ಹಾಲಿನಲ್ಲಿ ನೆನೆಹಾಕಿರಬೇಕು)