ಕೊಲಂಬೊ: 2023ರ ಏಷ್ಯಾ ಕಪ್ (Asia Cup 2023) ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಟೀಂ ಇಂಡಿಯಾ (Team India) 8ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ನಡುವೆ ಮಾನವೀಯತೆ ಮೆರೆದಿರುವ ಬಿಸಿಸಿಐ ಕಾರ್ಯದರ್ಶಿ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ (Jay Shah) ಟೂರ್ನಿಯ ಯಶಸ್ಸಿಗೆ ಕಾರಣಾದ ಕ್ರೀಡಾಂಗಣ ಸಿಬ್ಬಂದಿಗೆ 42 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ.
https://x.com/JayShah/status/1703356913264775482?s=20
ಏಷ್ಯಾ ಕಪ್ ಪ್ರಶಸ್ತಿಯನ್ನು ಗೆದ್ದಿದ್ದು ಭಾರತವೇ ಆದರೂ ಹೃದಯ ಗೆದ್ದದ್ದು ಮಾತ್ರ ಕೊಲೊಂಬೊ ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿ. ಅನಿರೀಕ್ಷಿತ ಮಳೆ, ಗುಡುಗು-ಸಿಡಿಲಿನ ಆರ್ಭಟದ ನಡುವೆಯೂ ಮೈದಾನ ಮತ್ತು ಪಿಚ್ ಅನ್ನು ನೆನೆಯದಂತೆ ನೋಡಿಕೊಂಡು, ಮೈದಾನಕ್ಕೆ ನೀರು ಬಂದರೂ ಅದನ್ನು ಹರಸಾಹಸದಿಂದ ಒಣಗಿಸಿ, ಆಟಕ್ಕೆ ಅಣಿಗೊಳಿಸಿದ ಅವರು, ಟೂರ್ನಿ ಯಶಸ್ವಿಯಾಗಲು ಪ್ರಮುಖ ಕಾರಣರಾಗಿದ್ದಾರೆ. ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳು ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಮಳೆಯ (Rain) ಹನಿ ನೆಲಕ್ಕೆ ಬೀಳುತ್ತಿದ್ದಂತೆಯೇ ಚುರುಕುತನದಿಂದ ಕೆಲಸ ಮಾಡುತ್ತಾ ಇಡೀ ಮೈದಾನವನ್ನ ಟಾರ್ಪಾಲ್ಗಳಿಂದ ಮುಚ್ಚುತ್ತಿದ್ದರು. ಇದೀಗ ಅವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಏಷ್ಯಾಕಪ್ ಟೂರ್ನಿಯ ಪಂದ್ಯಗಳು ನಡೆದ ಮೈದಾನದ ಪಿಚ್ ಕ್ಯುರೇಟರ್ ಮತ್ತು ಸಿಬ್ಬಂದಿಗೆ 50 ಸಾವಿರ ಡಾಲರ್ (42 ಲಕ್ಷ ರೂ.) ಬಹುಮಾನವನ್ನು ಘೋಷಿಸಲಾಗಿದೆ