ಮಾಜಿ ಕ್ರಿಕೆಟಿಗ ಸಂಜಯ್ ಮಾಂರ್ಜೇಕರ್ ವಿರಾಟ್ ಕೊಹ್ಲಿ ಗುಣಗಾಣ ಮಾಡಿದ್ದಾರೆ. ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ ವಿರಾಟ್ ಕೊಹ್ಲಿ ಅವರು ಅಧಿಕಾರ ಹಾಗೂ ನಾಯಕತ್ವವನ್ನು ಬಯಸದೆ ತಂಡದಲ್ಲಿ ಹೆಚ್ಚು ಸಮಯ ಕಳೆಯಲು ಬಯಸುತ್ತಾರೆ ವಿನಾ ವೈಯಕ್ತಿಕ ಲಾಭಕ್ಕಾಗಿ ಆಡೋಲ್ಲ ಎಂದು ಹೇಳಿದ್ದಾರೆ.
ತಮ್ಮದೇ ಆದ ಅಧಿಕೃತ ಯುಟ್ಯೂಬ್ ಚಾನೆಲ್ ನಲ್ಲಿ ಪತ್ರಕರ್ತ ವಿಮಲ್ ಕುಮಾರ್ ಜೊತೆ ಮಾತನಾಡಿರುವ ವಿಡಿಯೋವನ್ನು ಅಪ್ ಲೋಡ್ ಮಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಾಂರ್ಜೇಕರ್, ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಆಡಲು ಆನಂದಿಸುತ್ತಾರೆಯೇ ವಿನಃ ಅಧಿಕಾರ ಹಾಗೂ ನಾಯಕತ್ವವನ್ನು ಬಯಸಿದವರಲ್ಲ ಎಂದು ಗುಣಗಾಣ ಮಾಡಿದ್ದಾರೆ.
“ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿ ಅವರ ನಡುವೆ ಇರುವ ಏಕಸಾಮ್ಯತೆ ಎಂದರೆ, ಇಬ್ಬರೂ ಆಟಗಾರರು ಕ್ರಿಕೆಟ್ ಆಡುವುದನ್ನು ತುಂಬಾ ಆನಂದಿಸುತ್ತಾರೆ. ಅವರು ಸದಾ ಮೈದಾನದಲ್ಲಿ ಇರಲು ಬಯಸುತ್ತಾರೆ. ಏಷ್ಯಾಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 4 ಪಂದ್ಯದಲ್ಲಿ ವಿರಾಟ್ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಅವರು ಮೈದಾನದಲ್ಲಿ ಗುರುತಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಅಧಿಕಾರ ಮತ್ತು ನಾಯಕತ್ವವನ್ನು ಬಯಸುತ್ತಾರೆ ಎಂದರೆ ನಾನು ನಂಬುವುದಿಲ್ಲ,” ಎಂದು ಸಂಜಯ್ ಮಾಂರ್ಜೇಕರ್ ಹೇಳಿದ್ದಾರೆ.
34 ವರ್ಷದ ಆಧುನಿಕ ಕ್ರಿಕೆಟ್ ಜಗತ್ತಿನ ದಿಗ್ಗಜ 280 ಏಕದಿನ ಪಂದ್ಯಗಳಿಂದ 13,027 ರನ್, 111 ಟೆಸ್ಟ್ ಪಂದ್ಯಗಳಿಂದ 8676 ರನ್ ಹಾಗೂ 115 ಟಿ20 ಸ್ವರೂಪದಲ್ಲಿ 4008 ರನ್ ಗಳಿಸಿದ್ದು, ಎಲ್ಲ ಮಾದರಿಯಲ್ಲೂ ಶತಕ ಸಿಡಿಸಿದ್ದಾರೆ.