ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯಲಿದೆ. ಭಾರತದ ಆತಿಥ್ಯದಲ್ಲಿ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿ ಆಯೋಜನೆ ಆಗುತ್ತಿದೆ. ಈ ಬಗ್ಗೆ ಮಾತನಾಡಿರುವ 1996ರ ವಿಶ್ವ ಚಾಂಪಿಯನ್ಸ್ ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ ರಣತುಂಗ, ಆತಿಥೇಯ ಟೀಮ್ ಇಂಡಿಯಾ ತಾಯ್ನಾಡಿನ ಪ್ರೇಕ್ಷಕರ ಎದುರು ಟ್ರೋಫಿ ಗೆಲ್ಲಬೇಕಿದೆ.
“ಮುಂಬರುವ ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆಯುತ್ತಿರುವು ಆತಿಥೇಯ ಟೀಮ್ ಇಂಡಿಯಾಗೆ ಬಹುದೊಡ್ಡ ಅನುಕೂಲವಾಗಿದೆ. ಅಂದಹಾಗೆ ಇದರ ಜೊತೆಗೆ ಅನಾನುಕೂಲವೂ ಇದ್ದು, ತಾಯ್ನಾಡಿನ ಪ್ರೇಕ್ಷಕರ ಎದುರು ಟ್ರೋಫಿ ಗೆಲ್ಲಲೇ ಬೇಕಾದ ಅತೀವ ಒತ್ತಡ ಭಾರತ ತಂಡದ ಮೇಲಿದೆ. ಭಾರತದಲ್ಲಿ ಪ್ರೇಕ್ಷಕರು ಟೀಮ್ ಇಂಡಿಯಾ ಆಟಗಾರರ ಮೇಲೆ ಇನ್ನಿಲ್ಲದ ಒತ್ತಡ ಹೇರುತ್ತಾರೆ. ಎದುರಾಳಿಗಳ ಸವಾಲನ್ನು ಮೆಟ್ಟಿನಿಲ್ಲುವುದರ ಜೊತೆಗೆ ಟೀಮ್ ಇಂಡಿಯಾ ಆಟಗಾರರು ಪ್ರೇಕ್ಷಕರ ನಿರೀಕ್ಷೆಯ ಭಾರವನ್ನೂ ಹೊರಬೇಕಿದೆ,” ಎಂದು ಇಂಡಿಯನ್ ಎಕ್ಸ್ಪ್ರೆಸ್ಗೆ ಬರೆದಿರುವ ಲೇಖನದಲ್ಲಿ ರಣತುಂಗ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
“ಟೀಮ್ ಇಂಡಿಯಾ ಹೆಚ್ಚಾಗಿ ತನ್ನ ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಕಡೆಗೆ ಹೆಚ್ಚು ಗಮನ ನೀಡಿದೆ. ಆದರೆ, ನನ್ನ ಪ್ರಕಾರ ತಂಡದಲ್ಲಿ ಆರ್ ಅಶ್ವಿನ್ ಅವರಂತಹ ಅನುಭವಿ ಆಫ್ ಸ್ಪಿನ್ನರ್ ಇರಲೇ ಬೇಕು. ಅಶ್ವಿನ್ ಆಡಿದರೆ ಅವರು ಅಪ್ಪಟ ಮ್ಯಾಚ್ ವಿನ್ನರ್. ಉಳಿದವರಿಗೆ ಹೋಲಿಸಿದರೆ ಅಶ್ವಿನ್ಗೆ ಹೆಚ್ಚು ವಯಸ್ಸಾಗಿದೆ ನಿಜ. ಫೀಲ್ಡ್ನಲ್ಲಿ ಅವರು ಓಡುವುದು ಸ್ವಲ್ಪ ನಿಧಾನ ಸರಿ. ಆದರೆ, ಏಷ್ಯಾ ಭಾಗದ ಪಿಚ್ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯವಿರುವ ಸ್ಪಿನ್ನರ್ನ ಅಗತ್ಯ ತಂಡಕ್ಕಿದೆ,” ಎಂದು ಹೇಳಿದ್ದಾರೆ
ಆಸೀಸ್ ವಿರುದ್ಧ ಮೊದಲ ಎರಡು ಪಂದ್ಯಗಳಿಗೆ ಭಾರತ ತಂಡ
ಕೆಎಲ್ ರಾಹುಲ್ (ಕ್ಯಾಪ್ಟನ್/ವಿಕೆಟ್ಕೀಪರ್), ರವೀಂದ್ರ ಜಡೇಜಾ (ವೈಸ್ಕ್ಯಾಪ್ಟನ್), ಋತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ಕೀಪರ್), ಶಾರ್ದುಲ್ ಠಾಕೂರ್, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಆಸೀಸ್ ವಿರುದ್ಧ 3ನೇ ಪಂದ್ಯಕ್ಕೆ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ಕ್ಯಾಪ್ಟನ್), ಹಾರ್ದಿಕ್ ಪಾಂಡ್ಯ, (ವೈಸ್ಕ್ಯಾಪ್ಟನ್), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ಕೀಪರ್), ಇಶಾನ್ ಕಿಶನ್ (ವಿಕೆಟ್ಕೀಪರ್), ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಅಕ್ಷರ್ ಪಟೇಲ್ (ಫಿಟ್ನೆಸ್ ಖಾತ್ರಿಯಾಗಬೇಕಿದೆ), ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್. ಶಮಿ, ಮೊಹಮ್ಮದ್ ಸಿರಾಜ್.