ನಾನು ದುಡ್ಡಿಗಾಗಿ, ಹೆಸರಿಗಾಗಿ ಸಿನಿಮಾ ಮಾಡೋದಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ತೋತಾಪುರಿ’ ಮೊದಲ ಭಾಗವನ್ನು ಈಗಲೂ ಓಟಿಟಿಯಲ್ಲಿ ನೋಡಿ ಜನ ಮೆಚ್ಚಿಕೊಳ್ಳುತ್ತಾರೆ. ಐಎಎಸ್, ಐಪಿಎಸ್ ಅಧಿಕಾರಿಗಳೂ ನನಗೆ ಫೋನ್ ಮಾಡಿ ಹೇಳಿದ್ದಾರೆ. ಚಿತ್ರದ ಕೊನೆಯಲ್ಲಿ ಧನಂಜಯ ಬರುತ್ತಾರೆ. ತೋತಾಪುರಿ ಎರಡನೇ ಭಾಗದಲ್ಲಿ ಕಥೆ ತೀವ್ರವಾಗುತ್ತದೆ. ಕೊನೆಯಲ್ಲಿ ಒಂದು ಅಪೂರ್ವ ಸಂದೇಶ ಇರುತ್ತದೆ.
ಮನುಷ್ಯ ಜೀವನದಲ್ಲಿ ಕೊನೆಗೆ ಆತ್ಮ ಮಾತ್ರ ಉಳಿಯುವುದು. ಜಾತಿ ವ್ಯತ್ಯಾಸ ಇತ್ಯಾದಿಗಳು ಇಲ್ಲಿ ಬದುಕಿರುವಾಗ ಮಾತ್ರ. ಈ ಸಿನಿಮಾ ಕೂಡ ಅದನ್ನು ಧ್ವನಿಸುತ್ತದೆ. ಮನುಷ್ಯರನ್ನು ಮನುಷ್ಯರ ಥರ ನೋಡಬೇಕು ಅಂತ ಹೇಳುತ್ತದೆ.
– ಇಲ್ಲಿ ಒಳ್ಳೆಯ ಕಥೆ ಇದೆ, ಮನ ಮುಟ್ಟುವ ಪಾತ್ರಗಳಿವೆ. ಒಳ್ಳೆಯ ಪ್ಯಾಕೇಜ್ ಇದೆ. ಒಬ್ಬ ಹಳ್ಳಿಯ ಟೇಲರ್, ಅವನ ಸುತ್ತಮುತ್ತ ಇರುವ ಸಮಸ್ಯೆಯನ್ನು ಪರಿಹರಿಸುವ ವಿಶಿಷ್ಟತೆ ಇದೆ. ಇದು ವಾಸ್ತವಕ್ಕೆ ಹತ್ತಿರವಾಗಿರುವ ಸಿನಿಮಾ.
ನಾನು ಈಗ ಕಲಾವಿದ ಮಾತ್ರ ಅಲ್ಲ. ನನಗೆ ಈಗ ಜವಾಬ್ದಾರಿ ಇದೆ. ದುಡ್ಡಿಗಾಗಿ, ಹೆಸರಿಗಾಗಿ ಸಿನಿಮಾ ಮಾಡೋದಿಲ್ಲ. ಒಳ್ಳೆ ವಿಷಯ, ಸಂದೇಶ ಇರುವ ಸಿನಿಮಾ ಮಾಡಬೇಕು ನಾನು. ಹಾಗಾಗಿಯೇ ಈಗೀಗ ಯಾವ ಸಿನಿಮಾಗಳನ್ನೂ ಒಪ್ಪಿಕೊಂಡಿಲ್ಲ. ತೋತಾಪುರಿ ಚಿತ್ರದಲ್ಲಿ ನಟಿಸಿದ್ದಕ್ಕೆ ಕಾರಣವೇ ಇದರ ಘನವಾದ ಕತೆ.
ಈ ಚಿತ್ರದಲ್ಲಿ ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ ಎಂದರು.