ನವದೆಹಲಿ: ಆಪಲ್ (Apple) ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ ((iPhone 15 Series) ಮಾರಾಟವನ್ನು ಭಾರತದಲ್ಲಿ ಅಧಿಕೃತವಾಗಿ ಪ್ರಾರಂಭಿಸಿದೆ. ಐಫೋನ್ ಕೊಳ್ಳಲು ಗ್ರಾಹಕರ ದಂಡೇ ಸ್ಟೋರ್ಗಳ ಕಡೆ ಮುಖ ಮಾಡಿದೆ. ಐಫೋನ್ ವಿತರಣೆಗೆ ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆಯೇ ಗ್ರಾಹಕರು ಹಲ್ಲೆ ನಡೆಸಿರುವ ಘಟನೆ ನವದೆಹಲಿಯಲ್ಲಿ (New Delhi) ನಡೆದಿದೆ.
ಉತ್ತರ ದೆಹಲಿಯ ಕಮಲಾ ನಗರ ಮಾರುಕಟ್ಟೆಯಲ್ಲಿ ಘಟನೆ ನಡೆದಿದ್ದು, ದೃಶ್ಯದ ವೀಡಿಯೋ ಇದೀಗ ವೈರಲ್ ಆಗಿದೆ. ಶುಕ್ರವಾರ ಇಬ್ಬರು ಗ್ರಾಹಕರು, ಎಲೆಕ್ಟ್ರಾನಿಕ್ಸ್ ಶೋರೂಮ್ನ ಇಬ್ಬರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ನಡೆಸಿದವರನ್ನು ಜಸ್ಕಿರತ್ ಸಿಂಗ್ ಮತ್ತು ಮನದೀಪ್ ಸಿಂಗ್ ಎಂದು ಗುರುತಿಸಲಾಗಿದೆ
ಐಫೋನ್ ನೀಡಲು ತಡ ಮಾಡಿದ್ದಕ್ಕೆ ಸಿಬ್ಬಂದಿ ಮೇಲೆ ಗ್ರಾಹಕರು ರೋಷಗೊಂಡು ಹಲ್ಲೆ ನಡೆಸಿದ್ದಾರೆ. 10 ಕ್ಕೂ ಹೆಚ್ಚು ಇತರೆ ಸಿಬ್ಬಂದಿ ಧಾವಿಸಿದರೂ ಹಲ್ಲೆ ತಪ್ಪಿಸುವುದನ್ನು ಸಾಧ್ಯವಾಗಿಲ್ಲ. ಸಿಬ್ಬಂದಿ ಟೀ-ಶರ್ಟ್ ಕೂಡ ಹರಿದು ಹಾಕಲಾಗಿದೆ.