ನೀವು ಸ್ವಲ್ಪ ಡಿಫರೆಂಟ್ ಆಗಿ ಪ್ರೈ ಮಾಡ್ಬೇಕು ಅಂದ್ರೆ ಚಿಕನ್ ಫ್ರೈ ಮಸಾಲಾಮಾಡಿ ನೋಡಿ. ಚಿಕನ್ ಫ್ರೈ ಮಸಾಲ ರೆಸಿಪಿಯು ಕೂಡ ಸ್ವಾದಿಷ್ಟ ಅಡುಗೆಯಾಗಿದ್ದು ಅತಿಥಿಗಳ ಮೆಚ್ಚುಗೆಯನ್ನು ಪಡೆಯುವುದು ಖಚಿತವಾಗಿದೆ. ಆದರೆ, ಇದೇ ವೇಳೆಯಲ್ಲಿ ನೀವು ಒಂದು ವಿಷಯವನ್ನು ಗಮನಿಸಬೇಕು, ಈ ಖಾದ್ಯವನ್ನು ತಯಾರಿಸಲು ತುಂಬಾ ಹಸಿ ಮೆಣಸಿನಕಾಯಿಗಳನ್ನು ಬಳಸಲಾಗುತ್ತದೆ. ಹಾಗಾದರೆ ಬನ್ನಿ ಖಾರ ಮತ್ತು ಮಸಾಲೆಗಳಿಂದ ಕೂಡಿದ ಚಿಕನ್ ಫ್ರೈ ಮಸಾಲ ಖಾದ್ಯವನ್ನು ಮಾಡುವುದನ್ನು ತಿಳಿದುಕೊಳ್ಳೋಣ.
ಚಿಕನ್ – 500 ಗ್ರಾಂ
ಬೆಳ್ಳುಳ್ಳಿ ಪೇಸ್ಟ್ – ½ ಟೀಸ್ಪೂನ್
ಶುಂಠಿ ಪೇಸ್ಟ್ – ½ tbsp
ಗರಂ ಮಸಾಲಾ ಪುಡಿ – ½ tbsp
ಕರಿಬೇವಿನ ಎಲೆಗಳು – ಒಂದು ಕಟ್ಟು
ಎಣ್ಣೆ – 4 ಟೀಸ್ಪೂನ್
ಕತ್ತರಿಸಿದ ಈರುಳ್ಳಿ – ಒಂದು ಕಪ್
ಹಸಿರು ಮೆಣಸಿನಕಾಯಿ ಚೂರುಗಳು – 4
ಮೆಣಸಿನ ಪುಡಿ – 1 tbsp
ಕೊತ್ತಂಬರಿ ಪುಡಿ – 1 tbsp
ಉಪ್ಪು – ಅಗತ್ಯವಿರುವಂತೆ
ಹಸಿರು ಮೆಣಸಿನಕಾಯಿ – 2
ಮಾಡುವ ವಿಧಾನ:
ಪ್ಯಾನ್ ಅನ್ನು ಬಿಸಿ ಮಾಡಿ ಮತ್ತು ಎಣ್ಣೆಯನ್ನು ಸೇರಿಸಿ. ಕಾದ ಎಣ್ಣೆಯಲ್ಲಿ ಹಸಿರು ಮೆಣಸಿನಕಾಯಿ, ಕರಿಬೇವಿನ ಸೊಪ್ಪು ಮತ್ತು ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿಯಿರಿ.ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಫ್ರೈ ಮಾಡಿ. ಒಳ್ಳೆಯ ಕೆಂಪು ಬಣ್ಣ ಬರುವವರೆಗೆ ಫ್ರೈ ಮಾಡಿ.
ಕತ್ತರಿಸಿದ ಚಿಕನ್ ಕರಿ ಸೇರಿಸಿ ಮತ್ತು ಫ್ರೈ ಮಾಡಿ. ಅದರಲ್ಲಿರುವ ನೀರೆಲ್ಲ ಹೋಗುವಂತೆ ಚೆನ್ನಾಗಿ ಫ್ರೈ ಮಾಡಿ.
ಈಗ ಕೊತ್ತಂಬರಿ ಪುಡಿ, ಮೆಣಸಿನಕಾಯಿ, ಗರಂ ಮಸಾಲ ಮತ್ತು ಉಪ್ಪು ಹಾಕಿ ಫ್ರೈ ಮಾಡಿ. ಸ್ವಲ್ಪ ನೀರು ಚಿಮುಕಿಸಿ 15 ನಿಮಿಷ ಕುದಿಸಿ.
ನಿಮ್ಮ ಚಿಕನ್ ಮಸಾಲಾ ಫ್ರೈ ಈಗ ಸಿದ್ಧವಾಗಿದೆ. ಇದನ್ನು ಊಟದಲ್ಲಿ ಸೈಡ್ ಡಿಶ್ ಆಗಿ ತೆಗೆದುಕೊಳ್ಳಬಹುದು. ಅಥವಾ ಚಪಾತಿ ತಿನ್ನುವಾಗ ಸೈಡ್ ಡಿಶ್ ಆಗಿ ತಿನ್ನಬಹುದು
ಗ್ರೀನ್ ಚಿಲ್ಲಿ ಚಿಕನ್
*ಕೋಳಿ ಮಾಂಸ – 1 ಕೆ.ಜಿ
*ಹಸಿ ಮೆಣಸಿನಕಾಯಿಗಳು- 1 ಕಪ್ (ಸಣ್ಣದು)
*ಈರುಳ್ಳಿ – 2 (ಸೀಳಾಗಿ ಕತ್ತರಿಸಿದಂತಹುದು)
*ಬೆಳ್ಳುಳ್ಳಿ – 10 ತುಂಡು
*ಶುಂಠಿ – 1 ಮಧ್ಯಮ ಗಾತ್ರದ್ದು
*ತಾಜಾ ಕೊತ್ತಂಬರಿ ಸೊಪ್ಪು – 1/2 ಕಪ್ (ಕತ್ತರಿಸಿದಂತಹುದು)
*ರುಚಿಗೆ ತಕ್ಕಷ್ಟು ಉಪ್ಪು
*ಅರಿಶಿನಪುಡಿ – 1 ಟೀ. ಚಮಚ
*ಕೊತ್ತೊಂಬರಿ ಪುಡಿ- 2 ಟೀ. ಚಮಚ
*ಜೀರಿಗೆ ಪುಡಿ- 1 ಟೀ. ಚಮಚ
*ಗರಂ ಮಸಾಲ ಪುಡಿ- 1ಟೀ. ಚಮಚ
*ಜೀರಿಗೆ – 1 ಟೀ. ಚಮಚ
*ಎಣ್ಣೆ- 3 ಟೀ. ಚಮಚ
ತಯಾರಿಸುವ ವಿಧಾನ
ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕೊತ್ತಂಬರಿ ಸೊಪ್ಪು ಮತ್ತು ಹಸಿ ಮೆಣಸಿನಕಾಯಿಗಳನ್ನು ಸ್ವಲ್ಪ ನೀರು ಮತ್ತು ಉಪ್ಪಿನ ಜೊತೆಗೆ ಪೇಸ್ಟ್ ರೀತಿ ರುಬ್ಬಿಕೊಳ್ಳಿ.ಕೋಳಿ ಮಾಂಸವನ್ನು ಚೆನ್ನಾಗಿ ತೊಳೆದುಕೊಳ್ಳಿ ಮತ್ತು ಅವುಗಳನ್ನು ಅರ್ಧ ಗಂಟೆಗಳ ಕಾಲ ಈ ಮಿಶ್ರಣದಲ್ಲಿ ನೆನೆಸಿ ಅಂದರೆ ಮೆರಿನೇಟ್ ಮಾಡಿ.ನಂತರ ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ ಮತ್ತು ಅದರಲ್ಲಿ ಜೀರಿಗೆಯನ್ನು ಹಾಕಿ ಕೆಲ ನಿಮಿಷಗಳ ಕಾಲ ಉರಿಯಿರಿ.
*ಇದಕ್ಕೆ ಎಲ್ಲಾ ಹಸಿ ಮೆಣಸಿನ ಕಾಯಿಗಳನ್ನು ಹಾಕಿ, ಮೇಲೆ ಸ್ವಲ್ಪ ಉಪ್ಪು ಹಾಕಿ ಮತ್ತು ಮೆಣಸಿನಕಾಯಿಯ ಬಣ್ಣವು ಬದಲಾಗುವವರೆಗೆ ಉರಿಯಿರಿ. ಈಗ ಕೋಳಿ ಮಾಂಸವನ್ನು ಮಧ್ಯಮ ಗಾತ್ರದ ಉರಿಯಲ್ಲಿ 6-7 ನಿಮಿಷಗಳ ಕಾಲ ಉರಿಯಿರಿ.ನಂತರ ಇದಕ್ಕೆ ಕೊತ್ತೊಂಬರಿ ಪುಡಿ, ಉರಿದ ಜೀರಿಗೆ ಪುಡಿ, ಅರಿಶಿನ ಪುಡಿ ಮತ್ತು ಗರಂ ಮಸಾಲ ಪುಡಿಯನ್ನು ಹಾಕಿ. ಇದನ್ನು ಚೆನ್ನಾಗಿ ಮಿಶ್ರಣ ಮಾಡಿ, 3-4 ನಿಮಿಷಗಳ ಕಾಲ ಬೇಯಿಸಿ.
ಈಗ ಚಿಕನ್ ಹಾಕಿದ ಕಡಾಯಿ ಮುಚ್ಚಿ, ಕಡಿಮೆ ಉರಿಯಲ್ಲಿ 10-15 ನಿಮಿಷಗಳ ಕಾಲ ಬೇಯಿಸಿ. ಆಗಾಗ ಇದನ್ನು ತಿರುವಿ ಕೊಡಿ. ಇದೆಲ್ಲ ಮುಗಿದ ಮೇಲೆ, ಮುಚ್ಚಳವನ್ನು ತೆಗೆಯಿರಿ, ಉರಿಯನ್ನು ಆರಿಸಿ ಮತ್ತು ನಿಮ್ಮ ಮನೆ ಮಂದಿಗೆ ಬಡಿಸಿ. ಇದೀಗ ನಿಮ್ಮ ಮುಂದೆ ಖಾರವಾದ ಮತ್ತು ಮಸಾಲೆಯುತವಾದ ಗ್ರೀನ್ ಚಿಲ್ಲಿ ಚಿಕನ್ ರೆಸಿಪಿಯು ಸಿದ್ಧವಾಗಿದೆ. ಇದನ್ನು ಅನ್ನ ಮತ್ತು ಪರೋಟ ರೋಟಿಗಳ ಜೊತೆಗೆ ಸವಿಯಿರಿ.