ಈ ಆಪರೇಷನ್ ನಡೆದ ಎರಡು ದಿನಗಳಿಗೇ ರೋಗಿ ಚೇತರಿಸಿಕೊಂಡಿದ್ದು, ಖುಷಿ ಖುಷಿ ಕಾಮಿಡಿ ಮಾಡ್ಕೊಂಡು ಇದ್ದಾರೆ. ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಂಡಿದ್ದಾರೆ. ಮುಂದಿನ ದಿನಗಳು ಕಠಿಣ ಎಂದೇ ಹೇಳಬಹುದು. ಆದರೆ ಸದ್ಯದ ಸ್ಪಂದನೆ ನಮ್ಮನ್ನೇ ಅಚ್ಚರಿಯ ಮಡುವಿನಲ್ಲಿ ಕೆಡವಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಲಾರೆನ್ಸ್ ಫೌಸೆಟ್ ವ್ಯಕ್ತಿಯು ಹಂದಿ ಹೃದಯದ (Pig Heart) ಕಸಿ ಪಡೆದ ವಿಶ್ವದ ಎರಡನೇ ರೋಗಿಯಾಗಿದ್ದಾರೆ. ಇದು ವೈದ್ಯಕೀಯ ಸಂಶೋಧನೆಯ ಬೆಳವಣಿಗೆಯ ಕ್ಷೇತ್ರದಲ್ಲಿ ಮೈಲಿಗಲ್ಲು. ಪ್ರಾಣಿಗಳ ಅಂಗಗಳನ್ನು ಮನುಷ್ಯರಿಗೆ ಕಸಿ ಮಾಡುವುದರಿಂದ ಮಾನವ ಅಂಗಾಂಗ ದಾನಗಳ ದೀರ್ಘಕಾಲದ ಕೊರತೆಗೆ ಪರಿಹಾರ ನೀಡಬಹುದು. 1,00,000 ಕ್ಕೂ ಹೆಚ್ಚು ಅಮೆರಿಕನ್ನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುವವರ ಪಟ್ಟಿಯಲ್ಲಿದ್ದಾರೆ.