ಅವರು ಧರಿಸುವ ಉಡುಪು ಅವರನ್ನು ತುಸು ಎತ್ತರವಾಗಿ ಕಾಣುವಂತೆ ಮಾಡಬೇಕೇ ಹೊರತು, ಮತ್ತಷ್ಟು ಕುಳ್ಳಕ್ಕೆ ಅಲ್ಲ. ಆದ್ದರಿಂದ ಅಂತಹವರು ಎಂತಹ ಸ್ಟೈಲ್ ಬಟ್ಟೆ ಧರಿಸಬೇಕು ಎಂಬುದನ್ನು ಇಲ್ಲಿ ನೀಡಿದ್ದೇವೆ. ಇದರಿಂದ ನೀವು ಮತ್ತಷ್ಟು ಸುಂದರವಾಗಿ ಮತ್ತು ಕ್ಲ್ಯಾಸಿಯಾಗಿ ಕಾಣಿಸಿಕೊಳ್ಳಬಹುದಾಗಿದೆ.
ಈ ಮುಂಚೆ ರೆಡಿ ಸೀರೆಗಳೆಂದು ಕರೆಯಲ್ಪಡುವ ಸೀರೆಗಳೇ ಇಂದಿನ 1 ಮಿನಿಟ್ ಸೀರೆಗಳು. ಕಾಲ ಬದಲಾದಂತೆ ಹೆಸರು ಕೂಡ ಬದಲಾಗಿದೆ ಅಷ್ಟೇ. ಈ 1 ಮಿನಿಟ್ ಸೀರೆ ಕಾನ್ಸೆಪ್ಟ್, ಕಾರ್ಪೋರೇಟ್ ಕ್ಷೇತ್ರದ ಮಹಿಳಾ ಮಣಿಯರನ್ನ ಗಮನದಲ್ಲಿಟ್ಟುಕೊಂಡು ಈ ಸೀರೆಗಳನ್ನು ಆನ್ಲೈನ್ ಸೀರೆ ಶಾಪ್ಗಳು ಪರಿಚಯಿಸಿದ್ದವು. ಇದೀಗ ಈ ಕಾನ್ಸೆಪ್ಟ್ನ ಮುಂದುವರಿದ ಭಾಗವಾಗಿ, ಕಾಲೇಜು ಹುಡುಗಿಯರನ್ನ ಗಮನದಲ್ಲಿಟ್ಟುಕೊಂಡು ಅವರವರ ಅಭಿರುಚಿಗೆ ತಕ್ಕಂತೆ 1 ಮಿನಿಟ್ ಸೀರೆಗಳನ್ನ(One Minute Saree) ಸಿದ್ಧಪಡಿಸಿ ಸೇಲ್ ಮಾಡಲಾಗುತ್ತಿದೆ. ಈ ಸೀರೆಗೆ ಡಿಮ್ಯಾಂಡ್ ಕೂಡ ಇದೆ.
ಮಹಿಳೆಯರ ಬಜೆಟ್ಗೆ ತಕ್ಕಂತೆ ವಿವಿಧ ಶೈಲಿಯ ಬ್ರ್ಯಾಂಡ್ ಸೀರೆಗಳು ಮಾರುಕಟ್ಟೆಯಲ್ಲಿದೆ. ಸುಲಭವಾಗಿ ಉಟ್ಟು ಸಮಾರಂಭ, ಅಥವಾ ಆಫೀಸ್ಗೆ ಹೋಗಬಹುದಾದ ಕಾರಣ ಸೀರೆಗೆ ಸಹಜವಾಗಿ ಬೇಡಿಕೆ ಶುರುವಾಗಿದೆ. ಈ ಜನರೇಷನ್ ಮಹಿಳೆಯರು ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ.