ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ದೃಷ್ಟಿ ಸಮಸ್ಯೆಯೂ ಬರುತ್ತಿದೆ. ಆದರೆ, ಕಣ್ಣಿನ ದೃಷ್ಟಿ ಸಮಸ್ಯೆಯಿಂದ ಬಳಲುತ್ತಿರುವ ಬಹುತೇಕರಿಗೆ ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ಗಳನ್ನು ನೋಡುವುದರಿಂದ ನೋವು ಹೆಚ್ಚಾಗಿದ್ದು, ಕೆಲವರಿಗೆ ತಲೆನೋವು ಕೂಡ ಬರುತ್ತಿದೆ.
ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಹಸಿರು ತರಕಾರಿಗಳನ್ನು ಸೇವಿಸುವುದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ವಿಟಮಿನ್ ಸಿ ದೊರೆಯುತ್ತದೆ. ಆದ್ದರಿಂದ ಪ್ರತಿ ದಿನ ಈ ಕೆಳಗಿನ ಆಹಾರಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು.
ಪಾಲಕ್: ಕಣ್ಣಿನ ಸಮಸ್ಯೆಗಳಿಗೆ ಪಾಲಕ್ ಸೊಪ್ಪು ಪರಿಣಾಮಕಾರಿಯಾಗಿ ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರಲ್ಲಿರುವ ಲುಟೀನ್ ಮತ್ತು ಜಿಯಾಕ್ಸಾಂಥಿನ್ನಂತಹ ಆಯಂಟಿ ಆಯಕ್ಸಿಡೆಂಟ್ಗಳು ದೃಷ್ಟಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದು ದೇಹಕ್ಕೆ ವಿಟಮಿನ್ ಎ ಅನ್ನು ಸಹ ನೀಡುತ್ತದೆ. ಆದ್ದರಿಂದ ತೀವ್ರ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಪಾಲಕ್ ಸಲಾಡ್ ಸೇವಿಸಬೇಕು.
ಕೋಸುಗಡ್ಡೆ: ಹಸಿರು ಎಲೆಗಳ ತರಕಾರಿಗಳು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತವೆ. ಕೋಸುಗಡ್ಡೆಯಲ್ಲಿ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅಂಶ ಸಮೃದ್ಧವಾಗಿವೆ. ಈ ಅಂಶಗಳು ಕಣ್ಣಿನ ರೆಟಿನಾದ ಆಯಕ್ಸಿಡೇಷನ್ಗೆ ಸಂಬಂಧಿಸಿದ ಎಲ್ಲ ರೀತಿಯ ಸಮಸ್ಯೆಗಳನ್ನು ನಿವಾರಿಸುತ್ತದೆ