ಚೆನ್ನೈ: ಬಿಜೆಪಿ (BJP) ನೇತೃತ್ವದ ಎನ್ಡಿಎ ಒಕ್ಕೂಟದೊಂದಿಗಿನ 4 ವರ್ಷಗಳ ಮೈತ್ರಿಯಿಂದ ಹೊರಬಂದಿರುವುದಾಗಿ ಎಐಎಡಿಎಂಕೆ (AIADMK) ಹೇಳಿಕೆ ನೀಡಿದ ಬೆನ್ನಲ್ಲೇ ತಮಿಳುನಾಡು ಸಚಿವ ಹಾಗೂ ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ (Udayanidhi Stalin) ಪ್ರತಿಕ್ರಿಯಿಸಿದ್ದಾರೆ.
‘ಒಬ್ಬ ದರೋಡೆಕೋರ, ಮತ್ತೊಬ್ಬ ಕಳ್ಳ’ ಎಂಬಂತೆ ಎರಡೂ ಪಕ್ಷಗಳು ಒಟ್ಟಾಗಿ ಮುಂದಿನ ಚುನಾವಣೆಗೆ ಸ್ಪರ್ಧಿಸಬಹುದು. ಎಐಎಡಿಎಂಕೆ ಬಿಜೆಪಿಯೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡರೂ, 2024ರ ಲೋಕಸಭಾ ಚುನಾವಣೆಯಲ್ಲಿ ಡಿಎಂಕೆ ವಿಜಯಶಾಲಿಯಾಗಲಿದೆ ಎಂದು ಅವರು ಭವಿಷ್ಯ ನುಡಿದರು.
ಹೀಗೆ ಆಗುತ್ತಿರುವುದು ಇದು ಮೊದಲೇನಲ್ಲ. ಎಐಎಡಿಎಂಕೆ ಮತ್ತು ಬಿಜೆಪಿ ಜಗಳವಾಡಬಹುದು ಆದರೆ ಚುನಾವಣೆಯ ಸಮಯದಲ್ಲಿ ಅವರು ಮತ್ತೆ ಒಂದಾಗುತ್ತಾರೆ ಏಕೆಂದರೆ ಒಬ್ಬರು ದರೋಡೆಕೋರರು ಮತ್ತು ಇನ್ನೊಬ್ಬರು ಕಳ್ಳರು ಎಂದು ಸ್ಟಾಲಿನ್ ಹೇಳಿದರು.