2000 ರೂ. ನೋಟು ವಾಪಸ್ಗೆ ಇವತ್ತೇ ಕೊನೆಯ ದಿನವಾಗಿದೆ. ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.
ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆದುಕೊಂಡಿದ್ದ ಆರ್ಬಿಐ, ಬಳಿಕ ಅವುಗಳನ್ನು ಬ್ಯಾಂಕ್ಗೆ ಹಿಂದಿರುಗಿಸಲು ನೀಡಿದ್ದ 3 ತಿಂಗಳ ಗಡುವು ಶನಿವಾರ ಕೊನೆಗೊಳ್ಳಲಿದೆ.
ಹೀಗಾಗಿ ಕೊನೆಯ ದಿನ ಸಾರ್ವಜನಿಕರು ತಮ್ಮ ಹತ್ತಿರದ ಯಾವುದೇ ಬ್ಯಾಂಕ್ಗೆ ತೆರಳಿ ತಮ್ಮಲ್ಲಿರುವ 2,000 ರೂ. ಮುಖಬೆಲೆಯ ನೋಟುಗಳನ್ನು ಯಾವುದೇ ಬ್ಯಾಂಕುಗಳಲ್ಲಿ ನೀಡಿ ಇತರ ನೋಟುಗಳಿಂದ ಬದಲಾಯಿಸಿಕೊಳ್ಳಬಹುದು ಅಥವಾ ತಮ್ಮ ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಬಹುದಾಗಿದೆ.
ಈಗಾಗಲೇ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳ ಪೈಕಿ ಶೇ.93ರಷ್ಟು ನೋಟುಗಳು ಬ್ಯಾಂಕುಗಳಿಗೆ ಮರಳಿವೆ. ಹೀಗಾಗಿ ನೋಟು ಹಿಂದಿರುಗಿಸಲು ನೀಡಿರುವ ಗಡುವನ್ನು ವಿಸ್ತರಿಸುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ.