ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) – ಭುವನ್ (Bhuvan) ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈಗ ನವವಧು ಹರ್ಷಿಕಾ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮದುವೆಯಾದ ಬಳಿಕ ವೆಕೇಷನ್ಗಾಗಿ ಹರ್ಷಿಕಾ ದಂಪತಿ ಅಮೆರಿಕಾದಲ್ಲಿದ್ದಾರೆ. ಅಲ್ಲಿ ಫ್ಯಾಷನ್ ಶೋವೊಂದರಲ್ಲಿ ರ್ಯಾಪ್ ವಾಕ್ ಮಾಡಿದ ಬಳಿಕ ಕೆಲ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ. ರೆಡ್ ಕಲರ್ ಉಡುಗೆಯಲ್ಲಿ ಸಖತ್ ಬೋಲ್ಡ್ & ಗ್ಲ್ಯಾಮರಸ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ
ಫ್ಯಾಷನ್ ಡ್ರೆಸ್ ಧರಿಸಿದ್ದರೂ ಕೂಡ ತನ್ನ ಮಾಂಗಲ್ಯವನ್ನ ತೆಗೆಯದೇ ಫೋಟೋಗೆ ಪೋಸ್ ಕೊಟ್ಟಿರೋದು ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ
12 ವರ್ಷಗಳು ಪ್ರೀತಿಗೆ ಆಗಸ್ಟ್ 24ರಂದು ಮದುವೆಯಾಗುವ ಮೂಲಕ ಫ್ಯಾನ್ಸ್ಗೆ ಹರ್ಷಿಕಾ-ಭುವನ್ ಗುಡ್ ನ್ಯೂಸ್ ನೀಡಿದ್ದರು. ಕೊಡವ ಪದ್ಧತಿಯಂತೆ ಅದ್ದೂರಿಯಾಗಿ ಈ ಜೋಡಿ ಮದುವೆಯಾಗಿದ್ದಾರೆ.