ಬಂಧುಗಳು ಅಥವಾ ನಿಮ್ಮ ಆಪ್ತರು ಆಗಮಿಸಿದಾಗ ಅವರನ್ನು ಖುಷಿಪಡಿಸಲು ನೀವು ಈ ಪಾಕವಿಧಾನವನ್ನು ತಯಾರಿಸಬಹುದು. ಗರಿಗರಿಯಾದ ಪಕೋಡವನ್ನು ಸಂಜೆ ಸಮಯ ಟೀ ಅಥವಾ ಊಟದ ಜೊತೆಗೆ ಸೇವಿಸಬಹುದು. ಹಾಗಾದ್ರೆ ಇನ್ನೆಕೆ ತಡ ಬೇಕಾಗಿರುವ ಸಾಮಗ್ರಿಗಳ ಪಟ್ಟಿ, ಮಾಡುವ ವಿಧಾನವು ಈ ಕೆಳಗಿನಂತಿದೆ. ಇಂದು ನಾವು ಗರಿ ಗರಿಯಾದ ಪಕೋಡಾವನ್ನು ಮಾಡುವ ಬನ್ನಿ.
ಬೇಕಾಗುವ ಸಾಮಗ್ರಿಗಳು:
* ಚಿಕನ್- ಅರ್ಧ ಕೆಜಿ
* ಮೈದಾ- ಅರ್ಧ ಕಪ್
* ಅಕ್ಕಿ ಹಿಟ್ಟು- ಅರ್ಧ ಕಪ್
* ಜೋಳದ ಹಿಟ್ಟು- 2 ಚಮಚ
* ಮೊಟ್ಟೆ-1
* ಖಾರದ ಪುಡಿ- 1 ಚಮಚ
* ದನಿಯಾ ಪುಡಿ- 1ಚಮಚ
* ಕರಿಮೆಣಸು- ಅರ್ಧ ಚಮಚ
* ಅರಿಶಿಣ- ಅರ್ಧ ಚಮಚ
* ಈರುಳ್ಳಿ- 2
* ಕೊತ್ತಂಬರಿ ಸೊಪ್ಪು- ಸ್ವಲ್ಪ
* ಬೆಳ್ಳುಳ್ಳಿ- 1
* ಶುಂಠಿ- ಸ್ವಲ್ಪ
* ಹಸಿಮೆಣಸಿನಕಾಯಿ- 2
* ಜೀರಿಗೆ- 1 ಚಮಚ
* ಗರಂ ಮಸಾಲ ಪುಡಿ- ಅರ್ಧ ಚಮಚ
* ಅಡುಗೆ ಸೋಡಾ- ಸ್ವಲ್ಪ
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಮೈದಾ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಮೆಣಸಿನ ಪುಡಿ, ದನಿಯಾ, ಅರಿಶಿಣ, ಮೊಟ್ಟೆ, ಕತ್ತರಿಸಿದ ಬೆಳ್ಳುಳ್ಳಿ, ಶುಂಠಿ, ಕರಿಬೇವಿನ ಎಲೆ, ಹಸಿ ಮೆಣಸಿನಕಾಯಿ, ಜೀರಿಗೆ ಪುಡಿ, ಚಿಕನ್ ಮಸಾಲ, ಗರಂ ಮಸಾಲ, ಇಂಗು, ಬೇಕಿಂಗ್ ಪೌಡರ್ ಸೇರಿದಂತೆ ಇನ್ನಿತರ ಪದಾರ್ಥಗಳನ್ನು ಸೇರಿಸಿ ಸ್ವಲ್ಪ ನೀರನ್ನು ಬೆರೆಸಿ, ಚೆನ್ನಾಗಿ ಮಿಶ್ರಗೊಳಿಸಬೇಕು.
* ನಂತರ ಚಿಕನ್ ತುಂಡುಗಳನ್ನು ಹಾಕಿ ಚೆನ್ನಾಗಿ ಮಸಾಲೆಯೊಂದಿಗೆ ಮಿಶ್ರಣ ಮಾಡಿಕೊಂಡು, ಮಾಂಸಜೊತೆಗೆ ಮಸಾಲೆ ಸೇರಿಕೊಳ್ಳಲು ಕೆಲವು ಸಮಯ ಇಟ್ಟಿರಬೇಕು.
* ಈಗ ಒಂದು ಬಾಣಲೆಯಲ್ಲಿ ಕರಿಯಲು ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದ ಬಳಿಕ ಮಾಂಸದ ತುಂಡುಗಳನ್ನು ಒಂದೊಂದಾಗಿಯೇ ಎಣ್ಣೆಯಲ್ಲಿ ಬಿಡಿ. ಪಕೋಡವು ಎರಡು ಭಾಗದಲ್ಲೂ ಚೆನ್ನಾಗಿ ಬೆಂದು ಹೊಂಬಣ್ಣಕ್ಕೆ ಬರಬೇಕು. ಈಗ ರುಚಿಯಾದ ಪಕೋಡ ಸವಿಯಲು ಸಿದ್ಧವಾಗುತ್ತದೆ.