ದಿನನಿತ್ಯದ ಬಿಡುವಿಲ್ಲದ ಜೀವ ಶೈಲಿಯಲ್ಲಿ ವ್ಯಾಯಾಮಕ್ಕೆ ಸಮಯ ಹೊಂದಿಸಿಕೊಳ್ಳುವುದೇ ಸವಾಲು.ಹಾಗಿದ್ದರೆ ವ್ಯಾಯಾಮ ಮಾಡದೆ ಸುಲಭವಾಗಿ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ ಇಲ್ಲಿದೆ ನೋಡಿ ನಿಮಗೆ ಸರಳವಾದ ಟಿಪ್ಸ್!
ಮುಂಜಾನೆ ಸಮಯದಲ್ಲಿ ಬಿಸಿ ನೀರು ಕುಡಿಯಿರಿ
ನೀವು ನಿತ್ಯ ಬೆಳಿಗ್ಗೆ ಎದ್ದಾಗ ಒಂದು ಲೋಟ ಬಿಸಿ ನೀರು ಕುಡಿಯುವುದನ್ನು ರೂಢಿಸಿಕೊಳ್ಳಿ. ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಕರಿಸುತ್ತದೆ. ಅಲ್ಲದೇ ಈ ಅಭ್ಯಾಸದಿಂದ ನಿಮ್ಮ ಜೀರ್ಣಕ್ರಿಯೆಗೂ ಸಹಾಯವಾಗುತ್ತದೆ.
ಯೋಗಾಭ್ಯಾಸ ರೂಢಿಸಿಕೊಳ್ಳಿ
ಬೆಳಿಗ್ಗೆ ಯೋಗಾಭ್ಯಾಸ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಉದಾಹರಣೆಗೆ ಸೂರ್ಯ ನಮಸ್ಕಾರವನ್ನು ಸರಿಯಾದ ಸಮಯದಲ್ಲಿ ಮಾಡುವುದರಿಂದ ದೇಹದ 13.91 ಕ್ಯಾಲೊರಿ ಕಡಿಮೆ ಆಗುತ್ತದೆ. ಪ್ರತಿದಿನ ಅರ್ಧ ಗಂಟೆ ನಿಯಮಿತವಾಗಿ ಇದನ್ನು ಮಾಡುವುದರಿಂದ 278-280 ಕ್ಯಾಲೊರಿಗಳನ್ನು ಕರಗಿಸಲು ಸುಲಭವಾಗುತ್ತದೆ. ಹೌದು ಇನ್ನೂ ಅಚ್ಚರಿಯೆಂದರೆ ಯೋಗಾಭ್ಯಾಸ ಮಾಡುವುದರಿಂದ ಒಂದು ಗಂಟೆ ಕಾರ್ಡಿಯೋ ಮಾಡುವುದಕ್ಕಿಂತ ಉತ್ತಮ ಫಲಿತಾಂಶ ಸಿಗುತ್ತದೆ.
ಪೌಷ್ಟಿಕಾಂಶಯುಕ್ತ ಆಹಾರ ಸೇವನೆ
ಕೆಲಸದ ಒತ್ತಡದಲ್ಲಿ ಹಲವರು ಇತ್ತೀಚಿನ ದಿನಗಳಲ್ಲಿ ಬೆಳಿಗ್ಗೆ ಬ್ರೇಕ್ಫಾಸ್ಟ್ ಮಾಡುವುದನ್ನೇ ಮರೆತಿದ್ದೇವೆ. ಮಾಡಬೇಕು ಎನಿಸಿದರೂ ಸಮಯ ಸಾಲುವುದಿಲ್ಲ ಅಥವಾ ಇರುವ ಸ್ವಲ್ಪ ಸಮಯದಲ್ಲಿ ಯಾವ ರೀತಿ ಬ್ರೇಕ್ಫಾಸ್ಟ್ ಮಾಡಿಕೊಳ್ಳಬೇಕು ಎಂದು ಒಳಿಯುವುದಿಲ್ಲ. ನಿಮ್ಮ ಬೆಳಿಗ್ಗೆಯ ಉಪಹಾರದಲ್ಲಿ ಹೆಚ್ಚಿನ ಪ್ರೊಟೀನ್ ಸೇರಿರುವ ಆಹಾರವನ್ನು ಸೇವಿಸಿ. ಇದು ದಿನವಿಡೀ ತಾಜಾ ಮತ್ತು ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ಪ್ರೋಟೀನ್ ಭರಿತ ಉಪಹಾರಕ್ಕಾಗಿ ಮೊಟ್ಟೆ ಮತ್ತು ಮೊಳಕೆಯೊಡೆದ ಬೀನ್ಸ್ ಉತ್ತಮ ಆಯ್ಕೆಯಾಗಿದೆ.
ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಿ
ನಿತ್ಯವೂ ರಾತ್ರಿ ಬೇಗ ಮಲಗಿ. ಇದರಿಂದ ನೀವು ಸಾಮಾನ್ಯಕ್ಕಿಂತ ಹೆಚ್ಚು ಸಮಯ ನಿದ್ರಿಸಬಹುದು. ದೇಹವು ಪುನರ್ಶಕ್ತಿಪಡಿಯಲು ಹಾಗೂ ದೇಹದ ಅಂಗಾಂಗಳು ವಿಶ್ರಾಂತಿ ಪಡೆಯಲು ಸಹಕಾರಿ ಆಗುತ್ತದೆ.
ಅಷ್ಟೇ ಅಲ್ಲ, ನಾವು ಕಡಿಮೆ ನಿದ್ದೆ ಮಾಡಿದರೆ, ಹೆಚ್ಚು ಆಹಾರ ಸೇವಿಸುವುದು ಅಭ್ಯಾಸವಾಗುತ್ತದೆ. ಇದು ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳನ್ನು ಉಂಟುಮಾಡುತ್ತದೆ ಮತ್ತು ತೂಕ ನಷ್ಟವನ್ನು ತಡೆಯುತ್ತದೆ. ಆದ್ದರಿಂದ ಕನಿಷ್ಠ ಎಂಟು ಗಂಟೆಗಳ ನಿದ್ದೆ ಅತ್ಯಗತ್ಯ.
ಸೂರ್ಯನ ಬೆಳಕಿಗೆ ಮಯೊಡ್ಡಿ
ದಿನಕ್ಕೆ ಸ್ವಲ್ಪ ಸಮಯವಾದರೂ ಸೂರ್ಯನ ಬೆಳಕು ನಮ್ಮ ಮೇಲೆ ಬೀಳುವಂತೆ ಮಾಡಬೇಕು. ಸೂರ್ಯನ ಬೆಳಕಿಗೂ ತೂಕಕ್ಕೂ ಯಾವ ಸಂಬಂಧ ಎಂದು ನಿಮಗೆ ಅನಿಸಬಹುದು. ಸೂರ್ಯನ ಬೆಳಕು ನೇರವಾಗಿ ನಮ್ಮ ತ್ವಚೆಯ ಮೇಲೆ ಬಿದ್ದಾಗ ಅದು ಚರ್ಮದ ಅಡಿಯಲ್ಲಿರುವ ಕೊಬ್ಬನ್ನು ಒಡೆಯುತ್ತದೆ ಮತ್ತು ತೂಕ ಇಳಿಸಲು ಸಹಾಯ ಮಾಡುತ್ತದೆ.