ಹೈದರಾಬಾದ್ : ತೆಲಂಗಾಣದಲ್ಲಿ (Telangana) ವಿದ್ಯುತ್, ರೈಲು ಸಂಪರ್ಕ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಒತ್ತು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ (Narendra Modi) ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದರು. ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಬಿಆರ್ಎಸ್ ನಾಯಕ, ತೆಲಂಗಾಣ ಸಿಎಂ ಕೆಸಿ ರಾವ್ (KCR) ಎನ್ಡಿಎ ಸೇರಲು ಬಯಸಿದ್ದರು ಆದರೆ ನಾವು ಅವಕಾಶ ನೀಡಲಿಲ್ಲ ಎಂದು ಹೇಳಿದ್ದಾರೆ.
ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನಗಳನ್ನು ಗೆದ್ದಾಗ ಕೆಸಿಆರ್ಗೆ ಬೆಂಬಲ ಬೇಕಿತ್ತು. ಈ ಚುನಾವಣೆಗೂ ಮುನ್ನ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸುತ್ತಿದ್ದರು, ಆದರೆ ನಂತರ ದಿಢೀರ್ ಅದನ್ನು ನಿಲ್ಲಿಸಿದರು. ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯ ನಂತರ ಕೆಸಿಆರ್ ನನ್ನನ್ನು ಭೇಟಿ ಮಾಡಿದ್ದು ಅವರು ಎನ್ಡಿಎ ಸೇರಲು ಬಯಸಿದ್ದಾರೆ ಎಂದು ಹೇಳಿದರು. ಅವರಿಗೆ ಬೆಂಬಲ ನೀಡುವಂತೆ ಅವರು ನನ್ನನ್ನು ಕೇಳಿದರು. ನೀವು ಮಾಡಿದ ಕೆಲಸಗಳಿಂದಾಗಿ ನಿಮಗೆ ಮೋದಿಅವರೊಂದಿಗೆ ಸಂಬಂಧ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದೆ ಎಂದು ಮೋದಿ ಹೇಳಿದ್ದಾರೆ.