ಬಾಲಿವುಡ್ ಖ್ಯಾತ ನಟ ರಣಬೀರ್ ಕಪೂರ್ (Ranbir Kapoor) ಸೇರಿದಂತೆ ಹಲವರಿಗೆ ಇಡಿ (ಜಾರಿ ನಿರ್ದೇಶನಾಲಯ) (Enforcement Directorate) ನೋಟಿಸ್ ಜಾರಿ ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ರಣಬೀರ್ ಕಪೂರ್ ಇಡಿ ಅಧಿಕಾರಿಗಳ ಮುಂದೆ ಹಾಜರಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಉದ್ಯಮಿ ಸೌರಬ್ ಚಂದ್ರಶೇಖರ್ ಅವರ ದುಬಾರಿ ಮದುವೆ ಪಾರ್ಟಿಯಲ್ಲಿ ಹಲವು ಸಿಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಮದುವೆಯ ಪಾರ್ಟಿಯಲ್ಲಿ ಭಾಗಿಯಾಗುವುದಕ್ಕಾಗಿಯೇ ಹಣ ಪಡೆದಿದ್ದರು. ಇವರಿಗೆಲ್ಲ ನೀಡಿದ ಹಣವು ಮಹದೇವ ಬೆಟ್ಟಿಂಗ್ ಆಪ್ ನಿಂದ ಬಂದಿದ್ದಾಗಿದೆ. ಈ ಆಪ್ ನಲ್ಲಿ ಹವಾಲ ಹಣ ಹೂಡಿಕೆ ಮಾಡಲಾಗಿದೆ ಎನ್ನುವ ಆರೋಪವೂ ಕೇಳಿ ಬಂದಿದೆ. ಹಾಗಾಗಿ ಹಣ ಪಡೆದವರಿಗೆ ನೋಟಿಸ್ ನೀಡಿ ವಿಚಾರಣೆ ಕರೆಯಲಾಗುತ್ತಿದೆ.
ಬಾಲಿವುಡ್ ನ ಅನೇಕ ನಟ ನಟಿಯರು ಈ ಆಪ್ ನಲ್ಲಿ ಪರೋಕ್ಷವಾಗಿ ಹಣ ಹೂಡಿದ್ದಾರೆ ಎನ್ನುವ ಮಾಹಿತಿಯೂ ಇದೆ. ಕೆಲವರು ಇದರ ಜಾಹೀರಾತಿನಲ್ಲೂ ಭಾಗಿಯಾಗಿದ್ದಾರೆ. ಅಲ್ಲದೇ, ಆಪ್ ಪ್ರಚಾರದಲ್ಲೂ ತೊಡಗಿಕೊಂಡಿದ್ದಾರೆ. ಈ ಆಪ್ ಜೊತೆ ಗುರುತಿಸಿಕೊಂಡ ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುತ್ತಿದೆ. ರಣಬೀರ್ ಕಪೂರ್ ಜೊತೆ ಇನ್ನೂ ಒಂಬತ್ತು ಜನ ಸಿಲಿಬ್ರಿಟಿಗಳಿಗೂ ನೋಟಿಸ್ ನೀಡಲಾಗಿದೆ.