ಹೆಚ್ಚು ವ್ಯಾಪಕವಾಗಿ ಬೆಳಕೆಯಾಗುವ ವೆಬ್ ಬ್ರೌಸರ್ಗಳಲ್ಲಿ ಗೂಗಲ್ ಕ್ರೋಮ್ ಕೂಡಾ ಒಂದು. ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬ್ರೌಸರ್ ಅನ್ನು ಬಳಸುವಾಗ ನಿಮ್ಮ ಗೌಪ್ಯತೆಯನ್ನು ಕಾಪಾಡಲು ಕ್ರೋಮ್ ಬದ್ಧವಾಗಿದೆ ಎಂದು ಹೇಳಿಕೊಂಡಿದೆ. ಹೀಗಾಗಿ ಹೊಸ ಫೀಚರ್ ಅನ್ನು ಕ್ರೋಮ್ನಲ್ಲಿ ಪರಿಚಯಿಸಲಾಗಿದೆ. ಈ ಹೊಸ ವೈಶಿಷ್ಟ್ಯದ ಪರಿಚಯದೊಂದಿಗೆ ಜಾಹೀರಾತುದಾರರು ಜಾಹೀರಾತುಗಳ ಮೂಲಕ ಹೇಗೆ ನಿಮ್ಮನ್ನು ಗುರಿಪಡಿಸುತ್ತಾರೆ ಎಂಬುದರ ಕುರಿತು ನೀವು ಈಗ ಹೆಚ್ಚಿನ ನಿಯಂತ್ರಣವನ್ನು ಹೊಂದಲಿದ್ದೀರಿ. ಕ್ರಮೇಣ ಈ ಫೀಚರ್ ಕಂಪ್ಯೂಟರ್ ಮತ್ತು ಆಂಡ್ರಾಯ್ಡ್ ಡಿವೈಜ್ ಎರಡರಲ್ಲೂ ಲಭ್ಯವಾಗಲಿದೆ. ಇದು ನಿಮ್ಮ ಆದ್ಯತೆಗೆ ಅನುಗುಣವಾಗಿ ವರ್ಗೀಕರಿಸಿ ಜಾಹೀರಾತನ್ನು ನೀಡುತ್ತದೆ
ಜಾಹೀರಾತು ಗೌಪ್ಯತೆ ಸೆಟ್ಟಿಂಗ್ಗಳನ್ನು ಪ್ರವೇಶಿಸುವುದು :
- ನಿಮ್ಮ ಡಿವೈಜ್ನಲ್ಲಿ ಕ್ರೋಮ್ ಅಪ್ಲಿಕೇಷನ್ ಅನ್ನು ಗುರುತಿಸಿ ಮತ್ತು ಅದನ್ನು ತೆರೆಯಿರಿ.
- ಕ್ರೋಮ್ ಇಂಟರ್ಫೇಸ್ನ ಮೇಲಿನ ಬಲ ಮೂಲೆಯಲ್ಲಿ ನಿಮಗೆ ಮೂರು ಲಂಬ ಚುಕ್ಕೆಗಳು ಕಾಣುತ್ತವೆ. ಮೆನು ತೆರೆಯಲು ಈ ಚುಕ್ಕೆಗಳ ಮೇಲೆ ಟ್ಯಾಪ್ ಮಾಡಿ. ನಂತರ ಸೆಟ್ಟಿಂಗ್ಗಳನ್ನು ಆಯ್ಕೆ ಮಾಡಿಕೊಳ್ಳಿ.
- ಸೆಟ್ಟಿಂಗ್ ಮೆನುವಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ `ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ಯನ್ನು ಟ್ಯಾಪ್ ಮಾಡಿ. ಈ ಆಯ್ಕೆಯು ನಿಮ್ಮ ಆನ್ಲೈನ್ ಗೌಪ್ಯತೆಯ ವಿವಿಧ ಅಂಶಗಳನ್ನು ನಿಯಂತ್ರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.
- `ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ವಿಭಾಗದಲ್ಲಿ ನಿಮಗೆ `ಆಡ್ ಪ್ರೈವೇಸಿ’ ಎಂಬ ಆಯ್ಕೆ ಕಾಣಿಸುತ್ತದೆ. ಜಾಹೀರಾತು ಗೌಪ್ಯತೆಯ ಸೆಟ್ಟಿಂಗ್ಗೆ ಅಕ್ಸೆಸ್ ಪಡೆಯಲು ಅದರ ಮೇಲೆ ಟ್ಯಾಪ್ ಮಾಡಿ.
ಜಾಹೀರಾತು ವೈಶಿಷ್ಟ್ಯಗಳ ನಿರ್ವಹಣೆ :
ಒಮ್ಮೆ ನೀವು ಆಡ್ ಪ್ರೈವೇಸಿ ಸೆಟ್ಟಿಂಗ್ ಅನ್ನು ಪ್ರವೇಶಿಸಿದ ಮೇಲೆ, ನಿಮ್ಮ ಆದ್ಯತೆಗಳ ಪ್ರಕಾರ ನಿರ್ದಿಷ್ಟ ಜಾಹೀರಾತು ವೈಶಿಷ್ಟ್ಯಗಳನ್ನು ನೀವು ನಿರ್ವಹಿಸಬಹುದು. ಅದಕ್ಕೆ ನೀವು ಹೀಗೆ ಮಾಡಬೇಕು.
`ಆಡ್ ಪ್ರೈವೇಸಿ’ ಅಥವಾ ಜಾಹೀರಾತು ಗೌಪ್ಯತೆಯ ವಿಭಾಗದಲ್ಲಿ ಆನ್ ಅಥವಾ ಆಫ್ ಮಾಡಬಹುದಾದ ಜಾಹೀರಾತು ವೈಶಿಷ್ಟ್ಯಗಳ ಪಟ್ಟಿ ನಿಮಗೆ ಕಾಣಸಿಗುತ್ತದೆ. ನಿಮ್ಮ ಜಾಹೀರಾತು-ಸಂಬಂಧಿತ ಮಾಹಿತಿಯನ್ನು ಕ್ರೋಮ್ ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಈ ವೈಶಿಷ್ಟ್ಯಗಳು ನಿರ್ಧರಿಸುತ್ತವೆ. ಹೀಗಾಗಿ ಇದರ ಮೇಲೆ ಟ್ಯಾಪ್ ಮಾಡುವ ಮೂಲಕ ನೀವು ಕಸ್ಟಮೈಸ್ ಮಾಡಲು ಬಯಸುವ ಜಾಹೀರಾತು ವೈಶಿಷ್ಟ್ಯವನ್ನು ಆರಿಸಿಕೊಳ್ಳಬಹುದು.
ನಿರ್ದಿಷ್ಟ ಜಾಹೀರಾತು ವಿಷಯಗಳನ್ನು ವೆಬ್ಸೈಟ್ಗಳೊಂದಿಗೆ ಹಂಚಿಕೊಳ್ಳದಂತೆ ನಿರ್ಬಂಧಿಸಲು ನೀವು ಹೀಗೆ ಮಾಡಬೇಕು.
- ನಿಮ್ಮ ಡಿವೈಜ್ನಲ್ಲಿ ಕ್ರೋಮ್ ಅಪ್ಲಿಕೇಶನ್ ಅನ್ನು ತೆರೆಯಿರಿ.
- ಮೆನುವನ್ನು ತೆರೆಯಲು ಕ್ರೋಮ್ನ ಬಲ ಮೂಲೆಯಲ್ಲಿ ಲಂಬವಾಗಿರುವ ಮೂರು ಚುಕ್ಕೆಗಳನ್ನು ಟ್ಯಾಪ್ ಮಾಡಿ. ಬಳಿಕ `ಸೆಟ್ಟಿಂಗ್ಸ್’ ಅನ್ನು ಆಯ್ಕೆ ಮಾಡಿ.
- ಸೆಟ್ಟಿಂಗ್ಸ್ ಮೆನುವಿನಲ್ಲಿ ಕೆಳಗೆ ಸ್ಕ್ರಾಲ್ ಮಾಡಿ ಮತ್ತು `ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ಯನ್ನು ಟ್ಯಾಪ್ ಮಾಡಿ.
- `ಪ್ರೈವೇಸಿ ಆಂಡ್ ಸೆಕ್ಯೂರಿಟಿ’ ವಿಭಾಗದೊಳಗೆ ನಿಮಗೆ `ಆಡ್ ಪ್ರೈವೇಸಿ’ ಮತ್ತು `ಆಡ್ ಟಾಪಿಕ್ಸ್’ ಆಯ್ಕೆ ಕಾಣಿಸುತ್ತದೆ. ನಿಮ್ಮ ಜಾಹೀರಾತು ಆಸಕ್ತಿಗಳನ್ನು ನಿರ್ವಹಿಸಲು “ಜಾಹೀರಾತು ವಿಷಯಗಳು” ಅಥವಾ ಆಡ್ ಟಾಪಿಕ್ಸ್ ಮೇಲೆ ಟ್ಯಾಪ್ ಮಾಡಿ.