ಟೆಲ್ ಅವಿವ್: ಇಸ್ರೇಲ್ನಲ್ಲಿ (Israel) ಹಮಾಸ್ ಉಗ್ರರು (Hamas Militants) ದಾಳಿ ನಡೆಸಿರುವ ಹಿನ್ನೆಲೆ ಅಕ್ಟೋಬರ್ 14 ರವರೆಗೆ ಟೆಲ್ ಅವಿವ್ಗೆ (Tel Aviv) ಮತ್ತು ಅಲ್ಲಿಂದ ಹೊರಡುವ ವಿಮಾನವನ್ನು ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ (Air India) ಭಾನುವಾರ ತಿಳಿಸಿದೆ.
ಇಸ್ರೇಲ್ನಲ್ಲಿ ಹಮಾಸ್ ಉಗ್ರರು ದಾಳಿ ನಡೆಸಿದ್ದು, ಅನೇಕ ಮಂದಿ ಮೃತಪಟ್ಟಿದ್ದಾರೆ. ಈ ಹಿನ್ನೆಲೆ ವಿಮಾನಯಾನವನ್ನು ರದ್ದುಗೊಳಿಸಲಾಗಿದೆ. ನಮ್ಮ ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗಾಗಿ 2023ರ ಅಕ್ಟೋಬರ್ 14 ರವರೆಗೆ ಟೆಲ್ ಅವಿವ್ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಏರ್ಲೈನ್ ವಕ್ತಾರರು ತಿಳಿಸಿದ್ದಾರೆ.
ಅಲ್ಲದೇ ಈ ಅವಧಿಯಲ್ಲಿ ಯಾವುದೇ ವಿಮಾನದಲ್ಲಿ ಬುಕ್ಕಿಂಗ್ ದೃಢಪಡಿಸಿದ ಪ್ರಯಾಣಿಕರಿಗೆ ಸಾಧ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಏರ್ ಇಂಡಿಯಾ ರಾಷ್ಟ್ರೀಯ ರಾಜಧಾನಿಯಿಂದ ಟೆಲ್ ಅವಿವ್ಗೆ ಸೋಮವಾರ, ಮಂಗಳವಾರ, ಗುರುವಾರ, ಶನಿವಾರ ಮತ್ತು ಭಾನುವಾರ ಸೇವೆಯನ್ನು ಒದಗಿಸುತ್ತದೆ.