ಡೆಹ್ರಾಡೂನ್: ಹರಿಯಾಣದಿಂದ (Haryana) ಬರುತ್ತಿದ್ದ ಬಸ್ (Bus) ನೈನಿತಾಲ್ (Nainital) ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿದ ಪರಿಣಾಮ ಐವರು ಮಹಿಳೆಯರು, ಒಬ್ಬ ಪುರುಷ ಮತ್ತು ಒಂದು ಮಗು ಸೇರಿದಂತೆ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ 26 ಜನರನ್ನು ರಕ್ಷಿಸಲಾಗಿದ್ದು, ಹೆಚ್ಚಿನ ಕಾರ್ಯಾಚರಣೆ ನಡೆಯುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ಸಿವಿಲ್ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಅಧಿಕಾರಿಗಳ ಪ್ರಕಾರ, ನೈನಿತಾಲ್ನ ವಿಪತ್ತು ನಿಯಂತ್ರಣಾ ಕೊಠಡಿ ಭಾನುವಾರ 30 ರಿಂದ 33 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಕಾಲಾಧುಂಗಿ ರಸ್ತೆಯ ನಲ್ನಿಯಲ್ಲಿ ಕಂದಕಕ್ಕೆ ಉರುಳಿದೆ ಎಂದು ಎಸ್ಡಿಆರ್ಎಫ್ಗೆ ಮಾಹಿತಿ ನೀಡಿದೆ. ಈ ಮಾಹಿತಿಯ ಮೇರೆಗೆ ಕಮಾಂಡೆಂಟ್ ಎಸ್ಡಿಆರ್ಎಫ್ ಮಣಿಕಾಂತ್ ಮಿಶ್ರಾ ಅವರ ಸೂಚನೆಯಂತೆ ಪೋಸ್ಟ್ ರುದ್ರಪುರ, ನೈನಿತಾಲ್ ಮತ್ತು ಖೈರ್ನಾದಿಂದ ಎಸ್ಡಿಆರ್ಎಫ್ ರಕ್ಷಣಾ ತಂಡಗಳು ರಕ್ಷಣೆಗಾಗಿ ಸ್ಥಳಕ್ಕೆ ತೆರಳಿದೆ.