ಪ್ರತಿಯೊಂದು ಎಣ್ಣೆಗಳು ಕೂಡ ಕೂದಲಿಗೆ ಪೋಷಣೆ ನೀಡಿ, ಅದರ ಆರೈಕೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು. ಕೆಲವೊಂದು ಪ್ರಮುಖ ಎಣ್ಣೆಯಲ್ಲಿ ಒಂದಾಗಿರುವಂತಹ ಬಾದಾಮಿ ಎಣ್ಣೆಯು ಕೂದಲಿಗೆ ಎಲ್ಲಾ ರೀತಿಯಿಂದಲೂ ಪೋಷಣೆ ನೀಡುವುದು ಮಾತ್ರವಲ್ಲದೆ, ಕೂದಲನ್ನು ಕಾಂತಿಯುತವಾಗಿಸುವುದು.
ಬಾದಾಮಿ ಬೀಜವನ್ನು ನೀರಲ್ಲಿ ನೆನೆಸಿ ಸಿಪ್ಪೆ ತೆಗೆದು ಹಾಲು ಮತ್ತು ಸಕ್ಕರೆ ಜತೆ ಅರೆದು ಸೇವಿಸಿದರೆ ಎಲ್ಲಾ ರೀತಿಯ ಅಶಕ್ತತೆ ನಿವಾರಣೆಯಾಗುತ್ತದೆ.
-ಮಕ್ಕಳಿಗೆ ಶಕ್ತಿ ಕಡಿಮೆಯಾಗಿ ಸರಿಯಾಗಿ ನಡೆಯಲು ಆಗದಿದ್ದರೆ ಬಾದಾಮಿ ಎಣ್ಣೆಯನ್ನು ಎಳ್ಳೆಣ್ಣೆ ಜತೆ ಬೆರೆಸಿ ಪ್ರತಿ ದಿನ ಮಸಾಜ್ ಮಾಡಿದರೆ ಶಕ್ತಿ ಹೆಚ್ಚಾಗಿ ಚೆನ್ನಾಗಿ ಓಡಾಡುವರು.
ಒಂದರಿಂದ ಎರಡು ಬಾದಾಮಿ ಎಣ್ಣೆಯ ಹನಿಯನ್ನು ಕಿವಿಗೆ ಹಾಕಿದರೆ ಪದೇ ಪದೇ ಕಾಡುವ ಕಿವಿ ನೋವು ನಿಲ್ಲುತ್ತದೆ.
-ಹುಳುಕಲ್ಲು ಮತ್ತು ವಸಡಿನ ತೊಂದರೆ ಇದ್ದರೆ ಬಾದಾಮಿ ಬೀಜದ ಸಿಪ್ಪೆಯನ್ನು ಸುಟ್ಟು ಕರಕು ಮಾಡಿ ಅದಕ್ಕೆ ಸೈಂಧವ ಉಪ್ಪನ್ನು ಬೆರೆಸಿ ಪ್ರತಿದಿನ ಹಲ್ಲು ಉಜ್ಜಿದರೆ ಹುಳುಕು ಕಡಿಮೆಯಾಗಿ, ವಸಡು ಗಟ್ಟಿಯಾಗುತ್ತದೆ.
-ಬಾದಾಮಿಯನ್ನು ರೋಸ್ ವಾಟರ್ ಅಲ್ಲಿ ಅರೆದು ಸೇವಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ.
-ಹಾಲಿಗೆ ಬಾದಾಮಿ ಪುಡಿ ಮತ್ತು ಸ್ವಲ್ಪ ಕೇಸರಿಯನ್ನು ಸೇರಿಸಿ ಗರ್ಭಿಣಿಯರು ಸೇವಿಸಿದರೆ ಬೆಳೆಯುವ ಮಗು ಹಾಗು ತಾಯಿ ಇಬ್ಬರಿಗೂ ಉತ್ತಮ ಪೋಷಣೆ ಸಿಗುತ್ತದೆ.
-ಕಣ್ಣಿನ ಸುತ್ತ ಕಪ್ಪಾಗಿದ್ದರೆ ಪ್ರತಿ ದಿನ ರಾತ್ರಿ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿದರೆ ಕಪ್ಪು ನಿವಾರಣೆಯಾಗುತ್ತದೆ.
- ಇಂದಿನ ದಿನಗಳಲ್ಲಿ ಜನರು ಎದುರಿಸುವಂತಹ ದೊಡ್ಡ ಸಮಸ್ಯೆಯೆಂದರೆ ಅದು ತಲೆಹೊಟ್ಟು. ಬಾದಾಮಿ ಎಣ್ಣೆಯು ತಲೆಬುರುಡೆಯನ್ನು ಶುಚಿ ಮಾಡುವುದು ಮತ್ತು ಚರ್ಮದ ಸತ್ತ ಕೋಶಗಳನ್ನು ದೂರ ಮಾಡುವುದು.
- ಇದರಿಂದ ತಲೆಹೊಟ್ಟು ನಿವಾರಣೆ ಆಗುವುದು. ಇದು ನೈಸರ್ಗಿಕ ಕಂಡೀಷನರ್ ಆಗಿ ಕೆಲಸ ಮಾಡುವುದು. ಬಾದಾಮಿ ಎಣ್ಣೆಯು ಕೂದಲಿಗೆ ಹಗುರವಾಗಿದ್ದು, ಇದು ತಲೆಹೊಟ್ಟನ್ನು ದೂರ ಓಡಿಸುವುದು. ತಲೆಹೊಟ್ಟು ನಿವಾರಣೆ ಮಾಡಲು ಬಾದಾಮಿ ಎಣ್ಣೆಯ ಜತೆಗೆ ರೋಸ್ಮೆರಿ ಎಣ್ಣೆಯನ್ನು ಬಳಕೆ ಮಾಡಿದರೆ ತುಂಬಾ ಪರಿಣಾಮಕಾರಿ.