ಒತ್ತಡ ನಿಭಾಯಿಸಿ ಬ್ಯಾಟಿಂಗ್ ಹೇಗೆ ಮಾಡಬೇಕು ಎಂಬುದನ್ನು ಯುವ ಪೀಳಿಗೆಯವರು ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡಿ ಕಲಿತುಕೊಳ್ಳಬೇಕು ಎಂದು ಭಾರತ ತಂಡದ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಗುಣಗಾನ ಮಾಡಿದ್ದಾರೆ. ಪ್ರಸಕ್ತ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ, ಐದು ಬಾರಿಯ ಚಾಂಪಿಯನ್ಸ್ ಆಸ್ಟ್ರೇಲಿಯಾ ಎದುರು ಗೆದ್ದು ಶುಭಾರಂಭ ಮಾಡಿದೆ. ಪಂದ್ಯದಲ್ಲಿ ಸೋಲಿನ ದವಡೆಗೆ ಸಿಲುಕಿದ್ದ ಭಾರತ ತಂಡದ ಪರ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಜವಾಬ್ದಾರಿಯುತ 85 ರನ್ ಬಾರಿಸಿ ಆಸರೆಯಾಗಿದ್ದರು.
“ರನ್ನಿಂಗ್ ಬಿಟ್ವೀನ್ ವಿಕೆಟ್ ಇಲ್ಲಿ ಬಹಳಾ ಮುಖ್ಯವಾಗುತ್ತದೆ. ಸ್ಟ್ರೈಕ್ ಬದಲಾಯಿಸುತ್ತಲೇ ಇರಬೇಕು. ಇದರಿಂದ ಯಾವ ಹಂತದಲ್ಲೂ ಒತ್ತಡ ಎದುರಾಗುವುದಿಲ್ಲ. ಡಾಟ್ ಬಾಲ್ಗಳನ್ನು ಕಡಿಮೆ ಆಡಿದಷ್ಟೂ ಒತ್ತಡ ನಿಮ್ಮಿಂದ ದೂರವಾಗುತ್ತದೆ. ಹೊಸ ನಿಯಮಗಳಿಂದ 5 ಫೀಲ್ಡರ್ಗಳು 30 ಯಾರ್ಡ್ ಒಳಗಿರುತ್ತಾರೆ, ಜೊತೆಗೆ 2 ಹೊಸ ಚೆಂಡುಗಳನ್ನು ಬಳಸಲಾಗುವುದರಿಂದ ಯಾವುದೇ ಹಂತದಲ್ಲಿ ರನ್ ಗತಿ ಹೆಚ್ಚಿಸುಬಹುದು ಎಂಬುದನ್ನು ಬ್ಯಾಟರ್ಗಳು ಚೆನ್ನಾಗಿ ತಿಳಿದಿರುತ್ತಾರೆ,” ಎಂದು ಗಂಭೀರ್ ವಿವರಿಸಿದ್ದಾರೆ.