ದೆಹಲಿ: ಭಾರತದ ಆರ್ಥಿಕ ತಜ್ಞ ಅಮರ್ತ್ಯ ಸೇನ್ ನಿಧನ ಹೊಂದಿದವರೆಂದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಆಗಿತ್ತು. ಇದು ಸುಳ್ಳು ಸುದ್ದಿ . ತಮ್ಮ ತಂದೆ ಸತ್ತಿಲ್ಲ, ಬದುಕಿದ್ದಾರೆ ಎಂದು ಅಮರ್ತ್ಯ ಸೇನ್ ಅವರ ಮಗಳೇ ಸ್ವತಃ ಸ್ಪಷ್ಟಪಡಿಸಿದ್ದಾರೆ.
ಭಾರತದ ಧೀಮಂತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಸಾವನ್ನಪ್ಪಿದ್ದಾರೆ ಎಂದು ಹಾಲಿ ನೊಬೆಲ್ ಪುರಸ್ಕೃತ ಆರ್ಥಿಕ ತಜ್ಞೆ ಕ್ಲಾಡಿಯಾ ಗೋಲ್ಡಿನ್ ಎಂಬ ಹೆಸರಿನ ಎಕ್ಸ್ ಖಾತೆಯಲ್ಲಿ ಷೇರ್ ಮಾಡಲಾಗಿತ್ತು. ಈ ಟ್ವೀಟ್ ಆಧಾರದ ಮೇಲೆ ಬಹುತೇಕ ಮಾಧ್ಯಮಗಳು ಅಮರ್ತ್ಯ ಸೇನ್ ಸಾವಿನ ಸುದ್ದಿಯನ್ನು ವರದಿ ಮಾಡಿದ್ದವು. ಪಿಟಿಐ ಸುದ್ದಿ ಸಂಸ್ಥೆ ಕೂಡ ಇದೇ ಆಧಾರದ ಮೇಲೆ ಟ್ವೀಟ್ ಮಾಡಿತ್ತು. ಆದರೆ, ಮಗಳು ನಂದನಾ ದೇಬ್ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ